Wednesday, November 18, 2026

ಪ್ರಾಯೋಗಿಕ ಆವೃತ್ತಿ

ಹಾವೇರಿ| ನಾಳೆ ಪಿ.ಟಿ.ಸಿ.ಎಲ್. ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ

ರಾಜ್ಯ ಸರ್ಕಾರ ಮರು ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಪಿ.ಟಿ.ಸಿ.ಎಲ್. ಕಾಯ್ದೆ- 2023 ಕುರಿತು ಕಾರ್ಯಾಗಾರ ಮತ್ತು 10ನೇ ರಾಜ್ಯ ಸಮ್ಮೇಳನ ಹಾಗೂ ಮುಕ್ತ ಸಂವಾದವು ಆ.27ರಂದು ಬೆಳಗ್ಗೆ 10 ಗಂಟೆಗೆ ಹಾವೇರಿಯ ಪಿ.ಬಿ ರಸ್ತೆಯಲ್ಲಿರುವ ಶಿವಶಕ್ತಿ ಪ್ಯಾಲೇಸ್ ನಲ್ಲಿ ನಡೆಯಲಿದೆ.

1978ರಲ್ಲಿ ಜಾರಿಗೆ ಬಂದ ಪಿ.ಟಿ.ಸಿ.ಎಲ್. ಕಾಯ್ದೆಯ ಮರು ತಿದ್ದುಪಡಿ ಕಾನೂನು 2023ರಲ್ಲಿ ಮತ್ತೆ ಜಾರಿಗೆ ಬಂದಿದೆ. ಪಿ.ಟಿ.ಸಿ.ಎಲ್. ಕಾಯ್ದೆಯ 2023ರ ಕಾಯ್ದೆಯ ಬಗ್ಗೆ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು ದಲಿತ, ಧಮನಿತ, ಶೋಷಿತ ಸಮುದಾಯಗಳ ಸರ್ವರೂ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಲು ಮನವಿ ಮಾಡಲಾಗಿದೆ.

ಕಾರ್ಯಾಗಾರದಲ್ಲಿ ಪಿ.ಟಿ.ಸಿ.ಎಲ್. ಕಾಯ್ದೆಯ ಹೋರಾಟಗಾರ ರಾಮನಗರದ ಮಂಜುನಾಥ, ಹೆಸರಾಂತ ವಕೀಲರಾದ ಪ್ರೊ.ಹರಿರಾಮ್, ವಕೀಲರಾದ ಮಹೇಶದಾಸ್‌, ಎಚ್‌. ಎಲ್‌. ವೆಂಕಟೇಶ, ಅಲ್ಲದೇ ಸಂಪನ್ಮೂಲ ವ್ಯಕ್ತಿಗಳಾಗಿ ಹೈಕೋರ್ಟ್ ವಕೀಲ ಶಿವರುದ್ರಪ್ಪನವರು, ಸಿಸ್ಟರ್ ಅನಿತಾ ಡಿಸೋಜಾ, ಶೋಭಾ ಎಚ್.ಎಂ., ಸುವರ್ಣಾ ಎಂ. ಭಾಗವಹಿಸುವರು. ಹೆಚ್ಚಿನ ಮಾಹಿತಿಗೆ ಮಂಜುನಾಥ್ ಕರ್ಜಗಿ ಮೊ. 7353624733 ಸಂಪರ್ಕಿಸಬಹುದು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ