ಮಂಡ್ಯ ತಾಲ್ಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದೇಶಭಕ್ತ ಮೇಜರ್ ಧ್ಯಾನಚಂದ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಯಿತು.
ಮೇಜರ್ ಧ್ಯಾನಚಂದ್ ಅವರ ಜೀವನ ಚರಿತ್ರೆಯನ್ನು ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಹೆಚ್ ಡಿ ಚಂದ್ರಕಲಾ ಅವರು ಕೂಲಂಕಷವಾಗಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. ಧ್ಯಾನ್ ಚಂದ್ ಅವರು ಹಾಕಿ ಆಟದಲ್ಲಿ ತೋರಿದ ಸಾಧನೆಯನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಾದ ಸಾರಿಕಾ ಸ್ಪೂರ್ತಿ, ಸ್ವಾತಿ ಅವರು ಧ್ಯಾನ್ ಚಂದ್ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಕೆ ಎಂ ಪವಿತ್ರ ಅವರು ಶಿಸ್ತು ಬದ್ಧ ಜೀವನದಿಂದ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ ಕೇವಲ ಒಂದು ದಿನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ, ನೀವು ಸಹ ಶಿಸ್ತು ಬದ್ಧ ಜೀವನವನ್ನು ಅಳವಡಿಸಿ ಕೊಂಡು ಸಾಧನೆಯತ್ತ ಸಾಗಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದವರು, ಶಾಲೆಯ ಮಕ್ಕಳು ಹಾಜರಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಉಷಾರಾಣಿ ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತಿ ಇತ್ತು.




