Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬರ ಅಧ್ಯಯನ ಮತ್ತು ಜನ ಜಾಗೃತಿ ಅಭಿಯಾನ

ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗು ರೇಷ್ಮೆ ಬೆಳೆಗಾರರ ಒಕ್ಕೂಟದ ವತಿಯಿಂದ ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕಿಗೂ ಪ್ರವಾಸ ಮಾಡಿ ಬರ ಅಧ್ಯಯನ ಮತ್ತು ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರೇಷ್ಮೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಬೆಲೆ ಕುಸಿತ ಹಾಗೂ ರೇಷ್ಮೆ ಬೆಳೆಗೆ ಹೆಚ್ಚು ಕೀಟಬಾಧೆ ಮತ್ತು ಈ ವರ್ಷ ಮಳೆ ಮತ್ತು ನೀರು ಕೊರತೆ ಹಿನ್ನೆಲೆ ಹಿಪ್ಪುನೇರಳೆ ಬೆಳೆಯು ಸಂಪೂರ್ಣ ನೆಲ ಕಚ್ಚಿರುವ ಬಗ್ಗೆ ಅಧ್ಯಯನ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ರೇಷ್ಮೆ ಬೆಳೆಗಾರರ ಒಕ್ಕೂಟ ಸಂಚಾಲಕ ಜೋಗಿಗೌಡ ಮಾತನಾಡಿ , ಮೇ 5 ರಿಂದ 15ರವರಿಗೆ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಬರ ಅಧ್ಯಯನ ಮಾಡಲಿದ್ದೇವೆ, ಆಯಾ ತಾಲ್ಲೂಕಿನ ರೈತರು ಸಭೆಗೆ ಹಾಜರಾಗಿ ಸ್ಥಳೀಯ ಸಮಸ್ಯೆಗಳನ್ನು ಪರಿಶೀಲಿಸಲಿದ್ದೇವೆ ಎಂದರು.

ಪ್ರಸ್ತುತ ಕಂಡರಿಯದ ತೀವ್ರ ಬರಗಾಲಕ್ಕೆ ತುತ್ತಾಗಿರುವ ತೋಟಗಾರಿಕೆ ಬೆಳೆಗಳು, ರೇಷ್ಮೆ, ಕಬ್ಬು ಇತ್ಯಾದಿ ರೈತರಿಗೆ ಸಂಬಂಧಿಸಿದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಆ ಬೆಳೆಯ ಆದ್ಯತೆಯ ಮೇಲೆ ಕನಿಷ್ಠ ಎಕರೆಗೆ 25 ಸಾವಿರದ ಮೇಲೆ ಪರಿಹಾರವನ್ನು ಘೋಷಿಸಿ ತಕ್ಷಣ ರೈತರ ಪರ ಸರ್ಕಾರ ನಿಲ್ಲಬೇಕು ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಶಿವಕುಮಾರ್, ರಾಮಚಂದ್ರ , ಪುಟ್ಟೇಗೌಡ , ಅಪ್ಪಾಜಿಗೌಡ , ಚನ್ನಪ್ಪ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!