Thursday, September 19, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಸ್ಪರ್ಧೆ: ಪುಟ್ಟಸಿದ್ದಶೆಟ್ಟಿ

ವಿಧಾನ ಪರಿಷತ್ ಸದಸ್ಯ ಮಾಜಿ ಮರಿತಿಬ್ಬೇಗೌಡ ಅವರು ಪಕ್ಷಾಂತರಿಯಾಗಿದ್ದು ಶಿಕ್ಷಕರ ಪರವಾಗಿ ಯಾವುದೇ ಕಾರ್ಯವನ್ನು ಮಾಡಿಲ್ಲ, ಆದ್ದರಿಂದ ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ತಾವು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದು ತಮ್ಮನ್ನು ಬೆಂಬಲಿಸುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮರಿತಿಬ್ಬೇಗೌಡರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ಶಿಕ್ಷಕರ ಪರವಾಗಿ ಯಾವುದೇ ಕೆಲಸಗಳನ್ನು ಮಾಡಿಲ್ಲ, ತಾವು 1994 ರಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದು, ಹಾಗೆಯೇ ಕಾಯಕ ಸಮಾಜ ಒಕ್ಕೂಟವನ್ನು ಸ್ಥಾಪಿಸಿ ಮೂರು ಮಂದಿಯನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ್ದಲ್ಲದೆ ಇತರ ಪಕ್ಷಗಳ ಅಭ್ಯರ್ಥಿಗಳಿಗೂ ಬೆಂಬಲ ನೀಡಿ ಅವರನ್ನು ಗೆಲ್ಲಿಸಿರುವುದಾಗಿ ಹೇಳಿಕೊಂಡರು.

ಹೆಚ್ ಕೆ ಪಾಟೀಲ, ರಾಮಚಂದ್ರಗೌಡ ಸೇರಿದಂತೆ ಇತರರಿಗೆ ನಮ್ಮ ಸಂಘಟನೆ ವತಿಯಿಂದ ಬೆಂಬಲ ನೀಡಿದ್ದು 1990ರಲ್ಲಿ ಮರಿತಿಬ್ಬೇಗೌಡರನ್ನು ಗೆಲ್ಲಿಸಿದ್ದೇವೆ. ಅವರು ಶಿಕ್ಷಕರ ಸಂಘವನ್ನು ಮೆಟ್ಟಿಲಾಗಿ ಮಾಡಿಕೊಂಡು ಹೋಗಿದ್ದಾರೆ. ಆದರೆ ಶಿಕ್ಷಕರ ಪರವಾಗಿ ಯಾವುದೇ ಕೆಲಸವನ್ನು ಮಾಡಿಲ್ಲ ಎನ್ನುವ ದೂರು ಅವರ ಮೇಲಿದೆ ಎಂದರು .

ಮರಿತಿಬ್ಬೇಗೌಡರು ಮೊದಲು ಕಾಂಗ್ರೆಸ್ ನಲ್ಲಿದ್ದು ನಂತರ ಜೆಡಿಎಸ್ ಸೇರಿ ತರುವಾಯ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು,ಅವರು ಪಕ್ಷಾಂತರಿ ಆಗಿದ್ದಾರೆ ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿ ಕಾಯಕ ಸಮಾಜ ಒಕ್ಕೂಟದ ರಾಜ್ಯ ಸಂಚಾಲಕ ಹೆಚ್ಎಲ್ ಕೆಂಪಶೆಟ್ಟಿ ,ಉಪಾಧ್ಯಕ್ಷ ಶಿವಪ್ಪ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶಿವರಾಜು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!