Friday, September 20, 2024

ಪ್ರಾಯೋಗಿಕ ಆವೃತ್ತಿ

ಶೀಘ್ರ ರೈತ ಸಭಾಂಗಣ ನವೀಕರಣ: ಯು.ಸಿ. ಶೇಖರ್

ಸೆ.22 ರಂದು ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದ್ದು, ನಂತರ ರೈತ ಸಭಾಂಗಣವನ್ನು ಆಧುನಿಕವಾಗಿ ನವೀಕರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಯು. ಸಿ. ಶೇಖರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಹಾಗೂ ತಾಲೂಕಿನ ರೈತರ ಅನುಕೂಲಕ್ಕಾಗಿ ಸಂಘ ಸ್ಥಾಪನೆಯಾಗಿದ್ದು, ಹಲವಾರು ವಿಭಾಗಗಳನ್ನು ಹೊಂದಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನಮ್ಮ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ವಾರ್ಷಿಕ ಮಹಾಸಭೆ

ಸಂಘದ 51ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಕರೆಯಲಾಗಿದ್ದು, ಎಲ್ಲಾ ಸದಸ್ಯರಿಗೂ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ. ಆಹ್ವಾನ ಪತ್ರಿಕೆ ತಲುಪದೇ ಇದ್ದವರು ಇದನ್ನೇ ಆಹ್ವಾನ ಪತ್ರಿಕೆಯೆಂದು ಪರಿಗಣಿಸಿ, ಸಕಾಲಕ್ಕೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದರು.

ರೈತಸಭಾಂಗಣ ನವೀಕರಣ

ವಾರ್ಷಿಕ ಮಹಾಸಭೆಯ ನಂತರ ರೈತ ಸಭಾಂಗಣವನ್ನು ಆಧುನಿಕವಾಗಿ ನವೀಕರಣ ಮಾಡಲು ನಿರ್ಮಿತಿ ಕೇಂದ್ರಕ್ಕೆ ಅಂದಾಜು ವೆಚ್ಚದ ವರದಿ ಕೇಳಲಾಗಿದೆ.ರೈತ ಸಭಾಂಗಣದ ಕುರ್ಚಿಗಳು ಮುರಿದಿದ್ದು, ಗೋಡೆ ಶಿಥಿಲವಾಗಿದೆ.ರೈತ ಸಭಾಂಗಣದಲ್ಲಿ ಸರಳ ವಿವಾಹಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈಗ ಅವ್ಯವಸ್ಥೆ ಇರುವುದರಿಂದ ಕಾರ್ಯಕ್ರಮ ನಡೆಯುತ್ತಿಲ್ಲ.ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ನವೀಕರಣಕ್ಕೆ ತಗಲುವ ವೆಚ್ಚದ ಯೋಜನಾ ವರದಿ ನೀಡುವಂತೆ ಕೋರಿದ್ದೇವೆ. ಅವರು ವರದಿ ನೀಡಿದ ನಂತರ ನವೀಕರಣ ಕಾಮಗಾರಿ ಆರಂಭವಾಗಲಿದೆ ಎಂದರು.

ರೈತ ಸಮೃದ್ಧಿ ಕೇಂದ್ರ

ಕೇಂದ್ರ ಸರ್ಕಾರ ನಮ್ಮ ಸಂಘಕ್ಕೆ ರೈತರಿಗಾಗಿ ರೈತ ಸಮೃದ್ಧಿ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಕೃಷಿ ಪರಿಕರಗಳಾದ ಬಿತ್ತನೆ ಬೀಜ, ರಸಗೊಬ್ಬರ ಯಂತ್ರೋಪಕರಣಗಳು ಸೇರಿದಂತೆ ವ್ಯವಸಾಯಕ್ಕೆ ಅಗತ್ಯವಾದ ಇನ್ನು ಕೆಲ ಉತ್ಪನ್ನಗಳನ್ನು ಸಂಘದ ಮೂಲಕ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

ಪಾರದರ್ಶಕ ಆಡಳಿತ

ಸಂಘದ ನಿರ್ದೇಶಕ ಕೆ.ಸಿ. ರವೀಂದ್ರ ಮಾತನಾಡಿ, ಆರ್ ಎ ಪಿ ಸಿ ಎಂ ಎಸ್ ಗೆ ಸೇರಿದ ಶ್ರೀನಿವಾಸಪುರ ಗೇಟ್ ಹಾಗೂ ಶಂಕರ ಮಠದ ಬಳಿ ಗೋದಾಮುಗಳಿವೆ. ಇಲ್ಲೂ ಕೂಡ ಕಟ್ಟಡದ ಮೇಲ್ಬಾಗದ ತಾರಸಿಯಿಂದ ಮಳೆ ನೀರು ಸೋರುತ್ತಿದ್ದು ಸರಿಪಡಿಸಲು ನಿರ್ಧರಿಸಿದ್ದೇವೆ. ಸಂಘದ ವತಿಯಿಂದ ಬಟ್ಟೆ, ಹಾರ್ಡ್‌ವೇರ್,ಪೆಟ್ರೋಲ್ ಬಂಕ್ ವ್ಯಾಪಾರ ವಹಿವಾಟು ತುಂಬಾ ಚೆನ್ನಾಗಿ ನಡೆಯುತ್ತಿದೆ.ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿ ಕೊಂಡು ಪಾರದರ್ಶಕ ಆಡಳಿತ ನೀಡಲಾಗುತ್ತಿದೆ ಎಂದರು.

ಬಾಡಿಗೆ ವಸೂಲಿ

ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಪಾರದರ್ಶಕವಾಗಿ ನಡೆಯುತ್ತಿದೆ. ಕೋವಿಡ್ ಮತ್ತಿತರ ಕಾರಣಗಳಿಂದ ಅಂಗಡಿ ಮಳಿಗೆಗಳ ಮಾಲೀಕರು 1.09 ಕೋಟಿ ರೂ.ಬಾಡಿಗೆ ಕೊಟ್ಟಿರಲಿಲ್ಲ. ನೂತನ ಆಡಳಿತ ಮಂಡಳಿ ಸಭೆ ಸೇರಿ ನಾಲ್ಕು 2023ರ ವೇಳೆಗೆ ಬಾಡಿಗೆ ಕಟ್ಟಲು ಕಾಲಾವಕಾಶ ನೀಡಿದ್ದು, ಈಗಾಗಲೇ 75ರಿಂದ 80 ಲಕ್ಷದಷ್ಟು ಬಾಡಿಗೆ ವಸೂಲಿ ಮಾಡಲಾಗಿದೆ. ಶ್ರೀನಿವಾಸಪುರ ಗೇಟ್ ಬಳಿ ಇರುವ ಗೋದಾನು ಬಾಡಿಗೆಯನ್ನು ಸರ್ಕಾರ ಬಡ್ಡಿ ಸೇರಿಸಿ ಶೀಘ್ರ ಕೊಡಲಿದೆ ಎಂದರು.

ಷೇರುದಾರರ ಸಂಖ್ಯೆ ಹೆಚ್ವಳದ ಗುರಿ

ನಿರ್ದೇಶಕ ಬೇಲೂರು ಸೋಮಶೇಖರ್ ಮಾತನಾಡಿ, ಈಗಾಗಲೇ ಸಂಘದಲ್ಲಿ 25 ಲಕ್ಷ ರೂ ಹಣವಿದೆ.ಮುಂದಿನ ವರ್ಷ ಇನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ನೂತನ ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದರು.

ಸೆಪ್ಟೆಂಬರ್ 22ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಎಲ್ಲಾ ಸದಸ್ಯರು ಬಂದು ಆರ್‌ಎಪಿಸಿಎಂಎಸ್ ಅಭಿವೃದ್ಧಿಗೆ ಸಲಹೆ ಮತ್ತು ಸಹಕಾರಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಆರ್ ಟಿ ಸಿ ಹೊಂದಿರುವ ಯಾರಾದರೂ 1100 ರೂ.ಗಳನ್ನು ನೀಡಿ ಷೇರುದಾರವಾಗಬಹುದು. ಈಗಾಗಲೇ 5,400 ಶೇರುದಾರರಿದ್ದು ,ಈ ಸದಸ್ಯರ ಸಂಖ್ಯೆಯನ್ನು ಇನ್ನು ಹೆಚ್ಚು ಮಾಡುವ ಗುರಿ ನಮ್ಮದು ಎಂದರು.

ಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಉದಯ್ ಕುಮಾರ್, ಸಿ.ಕೆ.ಪಾಪಯ್ಯ, ಶ್ರೀಧರ್ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!