ಆರ್.ಆರ್.ಎಸ್. ದೇಶ ವಿಭಜನೆ ವಿರುದ್ಧ ಭಾರತ ಜೋಡೋ ಯಾತ್ರೆ
ಸಂವಿಧಾನದ ಉಳಿವಿಗಾಗಿ ದೇಶದುದ್ದಕ್ಕೂ ಪಾದಯಾತ್ರೆ
ದೇಶದ ಜನರಲ್ಲಿ ಐಕ್ಯತೆ ಮೂಡಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ ಐಕ್ಯತಾ ಯಾತ್ರೆ’ಗೆ ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಬೆಂಬಲ ನೀಡಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇವನೂರ ಮಹಾದೇವ ಅವರು ರಾಹುಲ್ ಗಾಂಧಿ ಅವರಿಗೆ ಭಾರತದ ಸಂವಿಧಾನ ಮತ್ತು ಸಂವಿಧಾನದ ಪೀಠಿಕೆಯನ್ನು ನೀಡಿ ಕರ್ನಾಟಕಕ್ಕೆ ಸ್ವಾಗತಿಸಿದರು. ದೇವನೂರು ಮಹಾದೇವ ನೀಡಿದ ಭಾರತದ ಸಂವಿಧಾನವನ್ನು ರಾಹುಲ್ ಗಾಂಧಿ ಎರಡೂ ಕೈಗಳಲ್ಲಿ ಮೇಲಕ್ಕೆತ್ತಿ ಜನರಿಗೆ ತೋರಿಸಿ ಹರ್ಷ ವ್ಯಕ್ತಪಡಿಸಿದರು.

ನಾಡಿನ ಖ್ಯಾತ ಸಾಹಿತಿ ದೇವನೂರು ಮಹಾದೇವ ರಾಹುಲ್ ಗಾಂಧಿಯವರಿಗೆ ಬೆಂಬಲ ಸೂಚಿಸಿದ್ದಕ್ಕೆ ಮಹಾದೇವ ಅವರನ್ನು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅಭಿನಂದಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೂಲಕ ಇಡೀ ದೇಶಕ್ಕೆ ‘ಸಂವಿಧಾನ ಉಳಿಸುವ’ ಚೈತನ್ಯವನ್ನು ನೀಡುತ್ತಿದೆ. ಭಾರತದಲ್ಲಿ ದಲಿತ ದೌರ್ಜನ್ಯದ ಬಳಿಕ ರಭಸ ಪಡೆದುಕೊಂಡಿರುವ ಶೂದ್ರ ವಿರೋಧಿ ಸಂಸ್ಕಾರವನ್ನು ಮೆಟ್ಟಿ ನಿಲ್ಲುವ, ಶೂದ್ರ ವಿರೋಧಿ ರಾಜಕಾರಣದ ಧಿಮಾಕನ್ನು ಕತ್ತರಿಸುವ ಪ್ರತಿಜ್ಞೆಯನ್ನು ಎಲ್ಲರೂ ಕೈಗೊಳ್ಳಬೇಕಿದೆ” ಎಂದು ಕಾಂಗ್ರೆಸ್ ವಕ್ತಾರ ಪ್ರಕಾಶ್ ರಾಥೋಡ್ ಹೇಳಿದ್ದಾರೆ.
ಭಾರತ ಐಕ್ಯತಾ ಯಾತ್ರೆಗೆ, ಜನಪರ ಚಳವಳಿ, ಸಂಘಟನೆ, ಸಾಹಿತಿಗಳು, ಕಲಾವಿದರು, ಚಿಂತಕರು ಹಾಗೂ ಸೌಹಾರ್ದ ಕನ್ನಡಿಗರ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’ ನೊಂದವರಿಗೆ ರಾಹುಲ್ ಗಾಂಧಿಯಿಂದ ಸಾಂತ್ವಾನ ಚಾಮರಾಜನಗರ ಕೊರೊನಾ ದುರಂತದಲ್ಲಿ ಮೃತಪಟ್ಟವರನ್ನು ಭೇಟಿ ಮಾಡಲಿರುವ ರಾಹುಲ್ ಗಾಂಧಿ ಬೆಂಡಗಳ್ಳಿ ಮೂಲಕ ಹಾದು ಹೋಗಲಿರುವ ರಾಹುಲ್ ಗಾಂಧಿ ನೇತೃತ್ವದ ‘ಭಾರತ ಐಕ್ಯತಾ ಯಾತ್ರೆ’ ಪಾದಯಾತ್ರೆ, ಸಂಜೆ ಬೇಗೂರು ಬಸ್ ನಿಲ್ದಾಣ ಸಮೀಪ ವಿರಮಿಸಲಿದೆ.
ಅಲ್ಲಿಂದ ಬೇಗೂರು ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿರುವ ಗ್ರೌಂಡ್ ನಲ್ಲಿ ಮೊದಲ ದಿನದ ಯಾತ್ರೆಯನ್ನು ಮುಗಿಸಲಿದ್ದಾರೆ. ಮೊದಲ ಕಾರ್ಯಕ್ರಮದಲ್ಲಿ ಚಾಮರಾಜ ನಗರ ಬುಡಕಟ್ಟು ಸಮುದಾಯ ಸಂಘದೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.
ಎರಡನೆ ಕಾರ್ಯಕ್ರಮದಲ್ಲಿ ಕೊರೊನಾ ದುರಂತದ ಸಮಯದಲ್ಲಿ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರ ಕುಟುಂಬಗಳೊಂದಿಗೆ ರಾಹುಲ್ ಗಾಂಧಿ ಸಮಾಲೋಚನಾ ಸಭೆ ನಡೆಸಿ, ಅವರಿಗೆ ಸಾಂತ್ವನ ಹೇಳಲಿದ್ದಾರೆ.




