Sunday, May 19, 2024

ಪ್ರಾಯೋಗಿಕ ಆವೃತ್ತಿ

ವಿದೇಶಿ ಶಿಕ್ಷಣ ಪಡೆಯಲು ಅರಿವು ಅಗತ್ಯ-ಪ್ರೊ.ಮಹದೇವ

ದಲಿತ ಸಮುದಾಯಗಳಿಗೆ ವಿದೇಶಿ ಶಿಕ್ಷಣ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಅರಿವು ಇಲ್ಲದಾಗಿದ್ದು, ಇಂತಹ ಅರಿವು ಪಡೆದುಕೊಂಡು ವಿದೇಶಿ ಶಿಕ್ಷಣ ಪಡೆಯಲು ಮುಂದಾಗಬೇಕೆಂದು ವಿಚಾರವಾದಿ ಪ್ರೊ.ಮಹದೇವ ಹೇಳಿದರು.

ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಎಸ್ಸಿಎಸ್ಟಿ ನಿವೃತ್ತ ನೌಕರರುಗಳ ಸಂಘದ ಆವರಣದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ನಿವೃತ್ತ ನೌಕರರುಗಳ ಕ್ಷೇಮಾಭಿವೃದ್ದಿ ಸಂಘ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಮಹಾಸಭೆ- ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ದಲಿತ ಸಮುದಾಯಗಳು ಸ್ಥಳೀಯ ಶಿಕ್ಷಣ ಪಡೆದು ವಿದ್ಯಾವಂತರಾದರೆ ಸಾಲದು, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ನಿವೃತ್ತ ನೌಕರರುಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಗುರುಮೂರ್ತಿ ಮಾತನಾಡಿ,  ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ನೌಕರರು ಮತ್ತು ನಿವೃತ್ತ ನೌಕರರು ಸಂಘದ ಅಭಿವೃದ್ದಿ ಚಟುವಟಿಕೆಗಳನ್ನು ಗಮನಿಸಬೇಕು, ಪಾರದರ್ಶಕ ಆಡಳಿತವನ್ನು ವೀಕ್ಷಿಸಿ, ಸದಸ್ಯತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಸಂಘದ ಮೇಲಂತಸ್ತು ನಿರ್ಮಾಣಕ್ಕೆ ಮುಂದಾಗಿದ್ದೇವೆ, ಎಲ್ಲರ ಆರ್ಥಿಕ ನೆರವು ಮತ್ತು ಸಹಕಾರ ಅವಶ್ಯವಿದೆ, ಕೈಜೋಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಗ್ರಂಥಾಲಯ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಹುಲ್ಕೆರೆ ಮಹದೇವು, ಕ್ರೀಡಾ ಸಾಧಕ ನಾರಾಯಣ, ಸಂಘದ ಉಪಾಧ್ಯಕ್ಷ ನಿರಂಜನ್, ಕೆ.ರಾಮಕೃಷ್ಣ, ಕಾರ್ಯದರ್ಶಿ ಸದಾಶಿವಮೂರ್ತಿ, ಎಂ.ರುದ್ರಪ್ಪ, ಸೋಮಣ್ಣ, ಡಾ.ಶ್ರೀನಿವಾಸ್‌ಮೂರ್ತೀ, ಅನ್ನದಾನಿ, ಪಾಪಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!