Thursday, September 19, 2024

ಪ್ರಾಯೋಗಿಕ ಆವೃತ್ತಿ

68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: ಯಾವ ಕ್ಷೇತ್ರದಲ್ಲಿ ಯಾರ್‍ಯಾರು ? ಇಲ್ಲಿದೆ ಮಾಹಿತಿ….

2023-24ನೇ ಸಾಲಿನಲ್ಲಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದ್ದು, ಕನ್ನಡ ನಾಡು- ನುಡಿಗಾಗಿ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನು ಕೂಡ ಸರಕಾರ ಗುರುತಿಸಿದೆ.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 2023ನೇ ಸಾಲಿನಲ್ಲಿ 68 ಸಾಧಕರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯ ಆಯ್ಕೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿದ್ಯ ನೀಡಲಾಗಿದೆ. ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಬಾರಿ 100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇವರಲ್ಲಿ ಓರ್ವರು ದಾವಣಗೆರೆ ಹಾಗೂ ಮತ್ತೋರ್ವರು ಉತ್ತರ ಕನ್ನಡ ಜಿಲ್ಲೆಯವರು. 54 ಪುರುಷ ಸಾಧಕರಿಗೆ ಮತ್ತು 13 ಮಹಿಳಾ ಮತ್ತು ಓರ್ವ ತೃತೀಯ ಲಿಂಗಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ 5ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನದ ಪದಕ ಸಿಗಲಿದೆ ಎಂದು ಸಚಿವ ತಂಗಡಗಿ ತಿಳಿಸಿದ್ದಾರೆ.

ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು , ನಿಜಗುಣಾನಂದ ಸ್ವಾಮಿಜಿ, ಲಕ್ಷ್ಮೀಪತಿ ಕೋಲಾರ, ಕೆಟಿ ಚಂದು, ಡಾ.ನಯನ ಎಸ್‌ ಮೋರೆ, ನೀಲಾ ಎಂ, ಚಾರ್ಮಾಡಿ ಹಸನಬ್ಬ, ಹಾಜಿ ಅಬ್ದುಲ್ಲ ಪರ್ಕಳ, ಕೆ. ಷರೀಫಾ ಸೇರಿದಂತೆ 68 ಮಂದಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!