Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಕೇಶ್ ಟಿಕಾಯಿತ್ ಮೇಲೆ ಹಲ್ಲೆ ಖಂಡಿಸಿ ರಾಜ್ಯಾದ್ಯಂತ ನಾಳೆ ಪ್ರತಿಭಟನೆಗೆ ಕರೆ

ಬೆಂಗಳೂರಿನ ಗಾಂಧೀ ಭವನದಲ್ಲಿ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟೆಕಾಯತ್, ಯುದ್ಧವೀರ್ ಸಿಂಗ್ ಮತ್ತು ಸಂಗಾತಿಗಳ ಮೇಲೆ ಬಿಜೆಪಿಯ ಗೂಂಡಾ ಪಡೆ ನಡೆಸಿರುವ ದಾಳಿಯ ಕೃತ್ಯವನ್ನು ಸಂಯುಕ್ತ ಹೋರಾಟ-ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.

ಈ ಗೂಂಡಾ ಧಾಳಿ ಖಂಡಿಸಿ ನಾಳೆ 31 ಮೇ 2022 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಸಂಯುಕ್ತ ಹೋರಾಟ-ಕರ್ನಾಟಕ ಕರೆ ನೀಡಿದೆ.

ನಾಳೆ 11 ಗಂಟೆಗೆ ಬೆಂಗಳೂರಿನ ಪ್ರತಿಭಟನೆಯು ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದ್ದು ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲಾ ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ ಯುವಜನ ಸಮಘಟನೆಗಳು ಸೇರಿದ೦ತೆ ಎಲ್ಲಾ ಸಹಭಾಗಿ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವರು.

ಇದು ಕೇವಲ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಬಳೆದಿರುವುದಲ್ಲ ದೇಶದ ರೈತ ಹೋರಾಟದ ಮೇಲೆಯೇ ಮಸಿ ಬಳೆಯುವ ಷಡ್ಯಂತರವನ್ನು ಬಿಜೆಪಿ ಹೆಣೆಯುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಈ ಷಡ್ಯಂತರವನ್ನು. ಸಂಯುಕ್ತ ಹೋರಾಟ-ಕರ್ನಾಟಕ ಖಂಡಿಸುತ್ತದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಕ್ಷಮಾಪಣೆ ಕೇಳಿ ಇಂತಹ ಷಡ್ಯಂತರವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಾಳೆಯಿಂದ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡುತ್ತದೆ.

ಕೋಡಿಹಳ್ಳಿ ವಿರುದ್ಧದ ಆರೋಪ ವಿಚಾರಣೆಗೆ ಸಮಿತಿ ರಚನೆ

ಇದೇ ದಿನ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಬಂದಿರುವ ಆರೋಪದ ಕುರಿತು ಸಂಯುಕ್ತ ಹೋರಾಟ-ಕರ್ನಾಟಕದ ಕೋರ್ ಕಮಿಟಿ ಸಭೆ ನಡೆಯುತ್ತಿತ್ತು. ಆರೋಪವು ಬಹಳ ಗಂಭೀರವಾಗಿದ್ದು ಇದನ್ನು ಸ್ವತಂತ್ರ ಮತ್ತು ಸಮಗ್ರವಾಗಿ ತನಿಖೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದಾಗಿ ಸಮಿತಿ ನಿರ್ಣಯಿಸಿದೆ. ಅದರ ಭಾಗವಾಗಿ ತ್ರಿಸದಸ್ಯ ಪೀಠವನ್ನು ಸಮಿತಿ ರಚಿಸಿದೆ.

ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕತ್ವದೊಂದಿಗೂ ಇದರ ಕುರಿತು ಎಲ್ಲಾ ದೃಷ್ಟಿಕೋನದಿಂದಲೂ ಚರ್ಚಿಸಿ ಸಮನ್ವಯ ಮಾಡಿಕೊಂಡು ಸಮಗ್ರವಾದ ತೀರ್ಮಾನದ ಮಾಡಲಾಗುವುದು. ಜೊತೆಗೆ ಸಂಪೂರ್ಣವಾದ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಸಂಯೋಜಕರಾದ ಬಡಗಲಪುರ ನಾಗೇಂದ್ರ ಮತ್ತು ಜಿ.ಸಿ. ಬಯ್ಯಾರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ  ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!