Tuesday, September 17, 2024

ಪ್ರಾಯೋಗಿಕ ಆವೃತ್ತಿ

ಓದಿನೊಂದಿಗೆ ಒಳ್ಳೆಯ ನಡವಳಿಕೆ ಬೆಳೆಸಿಕೊಂಡರೆ ಸಾಧಕರಾಗಲು ಸಾಧ್ಯ : ಸಿ.ಕೆ.ಜಗದೀಶ್

ವಿದ್ಯಾರ್ಥಿಗಳು ಉತ್ತಮ ಅಂಕಗಳ ಜೊತೆಗೆ ಒಳ್ಳೆಯ ನಡವಳಿಕೆ, ಮನೋವೃತ್ತಿ ಬೆಳೆಸಿ ಕೊಂಡಾಗ ಒಳ್ಳೆಯ ಸಾಧಕರಾಗಲು ಸಾಧ್ಯ ಎಂದು ಕರ್ನಾಟಕ ಪ್ರದೇಶ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಜಗದೀಶ್ ಹೇಳಿದರು.

ಮಂಡ್ಯ ನಗರದ ಯೋಗಿ ನಾರಾಯಣ ಸಮುದಾಯ ಭವನದಲ್ಲಿ ಸರ್ವ ಬಣಜಿಗರ ಸಂಘದ ವತಿಯಿಂದ 2021 – 22ನೇ ಸಾಲಿನ ಎಸ್ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಇನ್ನಷ್ಟು ಸಾಧನೆ ಮಾಡಲು ಸಂಘದ ವತಿಯಿಂದ ಪ್ರೋತ್ಸಾಹ ಧನ ಸ್ಪೂರ್ತಿದಾಯಕವಾಗಲಿ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸ್ವಯಂ ವಾಸ್ತವೀಕರಣ ತಿಳಿದುಕೊಳ್ಳಬೇಕು, ನಮ್ಮಲ್ಲಿರುವ ಶಕ್ತಿಯನ್ನು ಅರಿತುಕೊಂಡು ಪ್ರಯತ್ನ ಪಟ್ಟರೆ ಯಶಸ್ಸು ಸಿಗುತ್ತದೆ. ಮಂಡ್ಯ ಜಿಲ್ಲಾ ಬಣಜಿಗರ ಸಂಘ ರಾಜ್ಯದಲ್ಲಿ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ.ವೆಂಕಟೇಶ್ ಮಾತನಾಡಿ, ಶಿಕ್ಷಣಕ್ಕೆ ಅಜ್ಞಾನ, ಬಡತನ ಮತ್ತು ಶೋಷಣೆಯಿಂದ ಮುಕ್ತಿ ಗೊಳಿಸುವ ಶಕ್ತಿ ಇದೆ ಎಂದು ಹೇಳಿದರು.

ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಾಧಿಸುವ,ಗುರಿ ತಲುಪುವಂಥ ಸ್ಪೂರ್ತಿ ನೀಡಿದಂತಾಗುತ್ತದೆ. ನಾನೂ ಅವರಂತೆ ಓದಿ ಎಲ್ಲರ ಮುಂದೆ ಸನ್ಮಾನ ಪಡೆಯಬೇಕೆಂಬ ಛಲ ಮೂಡುತ್ತದೆ. ಶಿಕ್ಷಣ ನಮ್ಮಲ್ಲಿರುವ ಅಜ್ಞಾನ ಅಳಿಸುವುದರೊಂದಿಗೆ ಬಡತನ, ಶೋಷಣೆ,ಸಾಮಾಜಿಕ ಪಿಡುಗುಗಳಿಂದ ಹೊರಬರಲು ಸಹಕಾರಿ ಆಗಿದೆ. ಈ ದೇಶದಲ್ಲಿ ಬಡತನ ಮತ್ತು ಶೋಷಣೆ ಎನ್ನುವ ಎರಡು ಪಿಡುಗುಗಳಿವೆ. ಇವುಗಳನ್ನು ಅನುಭವಸಿದವರಿಗೆ ಅದರ ನೋವು ತಿಳಿದಿರುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿರುವ ಈ ಪಿಡುಗುಗಳನ್ನು ಹೋಗಲಾಡಿಸಬೇಕು ಎಂದರು.

ತುಮಕೂರು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಅಂಜನಪ್ಪ, ಜಿಲ್ಲಾ ಸರ್ವ ಬಣಜಿಗರ ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ಬಾಬು, ಗೌರವಾಧ್ಯಕ್ಷ ಎಂ.ವಿ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಶಾಂತ್, ಉಪಾಧ್ಯಕ್ಷರಾದ ಕೆ.ನಾಗಾನಂದ, ಎಂ.ಕೆ.ಜಗದೀಶ್, ಮಹಿಳಾ ವಿಭಾಗದ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಅನ್ನಪೂರ್ಣ, ಪ್ರಧಾನ ಕಾರ್ಯದರ್ಶಿ ನಂದಾ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!