Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಾದೇಶಿಕ ಅಭಿಮಾನ ರೂಢಿಸಿಕೊಳ್ಳಿ-ಸುರೇಶ್ ಗೌಡ

ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಇತರ ರಾಜ್ಯಗಳಂತೆ ಕನ್ನಡಿಗರು ಪ್ರಾದೇಶಿಕ ಅಭಿಮಾನವನ್ನು ರೂಢಿಸಿಕೊಳ್ಳಬೇಕೆಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದರು.

ನಾಗಮಂಗಲ ಪಟ್ಟಣದ ಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬೇರೆ ರಾಜ್ಯಗಳ ಜನರು ಪ್ರಾದೇಶಿಕತೇ ರೂಢಿಸಿಕೊಳ್ಳುವ ಮೂಲಕ ತಮ್ಮ ತನವನ್ನ ಕಾಪಾಡಿಕೊಳ್ಳುತ್ತ ಇದ್ದಾರೆ, ನಾವು ಕೂಡ ಪ್ರಾದೇಶಿಕತೇ ಕಂಡು ಕೊಳ್ಳುವ ಮೂಲಕ ನಮ್ಮ ನಾಡು ನುಡಿ ಸಂಸ್ಕೃತಿಗೆ ಶ್ರಮಿಸೋಣ, ಇಂದು ನಾವು ಕನ್ನಡ ನಾಡಿನಾದ್ಯಂತ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ, ಈ ಆಚರಣೆ ಕೇವಲ ನವಂಬರ್ ತಿಂಗಳಿಗೆ ಸೀಮಿತವಾಗಿರದೆ ನಮ್ಮ ನಾಡು, ನುಡಿ, ಸಂಸ್ಕೃತಿ ಪ್ರಾದೇಶಿಕತೇ ಬಹಳ ಮುಖ್ಯವಾಗಿದೆ. ಸ್ವತಂತ್ರ ಬಂದು ಹಲವು ವರ್ಷಗಳು ಕಳೆದರು ನಮ್ಮ ನೆಲ ಜಲ ಸಂಸ್ಕೃತಿ ಪಡೆದುಕೊಳ್ಳಲು ನಾವಿನ್ನು ಹೋರಾಟ ಮಾಡುತ್ತಾ ಇದ್ದೇವೆ, ಇದರಿಂದ ನಾವು ಇನ್ನು ಸಂಪೂರ್ಣ ಸ್ವತಂತ್ರ ಪಡೆದಿಲ್ಲ ಎಂಬುದು ಗೋಚರಿಸುತ್ತದೆ ಎಂದು ನುಡಿದರು.

ತಾಲೂಕು ದಂಡಾಧಿಕಾರಿ ನಂದೀಶ್ ಮಾತನಾಡಿ, ಕನ್ನಡ ಭಾಷೆಯು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಕನ್ನಡನಾಡಿನ ವೈಭವವನ್ನ ಕವಿರಾಜ ಮಾರ್ಗದಲ್ಲಿ ತಿಳಿಯಬಹುದು, ಜೊತೆಗೆ ಮೌರ್ಯರ ಆಡಳಿತ ಅವಧಿಯಲ್ಲಿ ಕರುನಾಡಿನಲ್ಲಾದ ಬದಲಾವಣೆ, ಕರ್ನಾಟಕ ಎಂಬ ಹೆಸರು ಹೇಗೆ ಬಂತು ಅದರ ವೈಶಿಷ್ಟವನ್ನ ತಿಳಿಸಿ, ದೇವರಾಜು ಅರಸು ಅವರು ತಮ್ಮ ಆಡಳಿತದ ಅವಧಿಯಲ್ಲಿ ಕರ್ನಾಟಕಕ್ಕಾಗಿ ಎಷ್ಟು ಶ್ರಮಿಸಿದ್ದಾರೆ, ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಮಾಡಿ ಆಡಳಿತ ಮಾಡಿಕೊಂಡು ಬರುತ್ತಾ ಇದ್ದೇವೆ, ನಮ್ಮ ನಾಡಿಗೆ ನಮ್ಮದೇ ಆದಂಥ ಒಂದು ವೈಶಿಷ್ಟತೇ ಇದೇ ನಾಡು ನುಡಿಗಾಗಿ ನಾವು ಶ್ರಮಿಸೋಣ ಎಂದು ತಿಳಿಸಿದರು.

ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪರ್ಚನೆ ಮಾಡಿ ಕನ್ನಡ ಬಾವುಟವನ್ನ ಆರಿಸಿದರು, ತಾಲೂಕು ದಂಡಾಧಿಕಾರಿ ನಂದೀಶ್ ರಾಷ್ಟ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಶಾಲೆಯ ಮಕ್ಕಳ ಜೊತೆಗೂಡಿ ರಾಷ್ಟ ಗೀತೆ, ವಂದೇಮಾತರಂ, ನಾಡಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದ್ದು ವಿಶೇಷಗಿತ್ತು.

ತಾಲೂಕು ಆಡಳಿತ ಘಟಕದ ವತಿಯಿಂದ ಶಾಸಕ ಸುರೇಶ್ ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು, ಜೊತೆಗೆ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ವಿಶೇಷ ವ್ಯಕ್ತಿಗಳನ್ನ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಆಶಾ, ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶ್, ಡಿವೈಎಸ್ಪಿ ಲಕ್ಸ್ಮಿನಾರಾಯಣ್, ಸಿಪಿಐ ಸುಧಾಕರ್, ಹನುಮಂತರಾಯಪ್ಪ,ಮಲ್ಲಿಕಾರ್ಜುನ, ಆನಂದ್ ಸಿಂಗ್, ಶಿವಣ್ಣಗೌಡ ತಾಲೋಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!