Friday, September 20, 2024

ಪ್ರಾಯೋಗಿಕ ಆವೃತ್ತಿ

ಯುದ್ಧ ಒಪ್ಪಂದ| ಪರಸ್ಪರ ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್- ಇಸ್ರೇಲ್

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ 4 ದಿನಗಳ ಕದನ ಒಪ್ಪಂದದ ಭಾಗವಾಗಿ ಶುಕ್ರವಾರ 24 ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡಿದರೆ ಇಸ್ರೇಲ್‌ 39 ಪ್ಯಾಲೆಸ್ತೀನ್‌ ನಾಗರಿಕರನ್ನು ಬಿಡುಗಡೆ ಮಾಡಿದೆ.

ಹಮಾಸ್‌ ಬಿಡುಗಡೆ ಮಾಡಿದ 24 ಒತ್ತೆಯಾಳುಗಳಲ್ಲಿ 13 ಇಸ್ರೇಲಿಗಳು, 10 ಥಾಯ್ಲೆಂಡ್ ಮತ್ತು ಫಿಲಿಪೈನ್ಸ್‌ನ ಓರ್ವರು ಸೇರಿದ್ದಾರೆ ಎಂದು ಕತಾರ್ ತಿಳಿಸಿದೆ.

ಈ ಒಪ್ಪಂದವು ಯುದ್ಧ ಸಂತ್ರಸ್ತ ಗಾಝಾದ ಜನರಿಗೆ ಅಗತ್ಯವಿರುವ ಸಹಾಯದ ನೆರವಿಗೆ ದಾರಿ ಮಾಡಿಕೊಟ್ಟಿದೆ. ಅ.7ರ ಹಮಾಸ್‌ನ ದಾಳಿಯ ಬಳಿಕ ಸೆರೆಯಾಳಾಗಿದ್ದ ಪ್ರೀತಿಪಾತ್ರರ ಬಗ್ಗೆ ಇಸ್ರೇಲ್ ಮತ್ತು ಇತರ ದೇಶದ ಒತ್ತೆಯಾಳುಗಳ ಕುಟುಂಬಗಳಿಗೆ ಇದು ಕೊಂಚ ಸಮಾಧಾನವನ್ನುಂಟುಮಾಡಿದೆ.

ಶುಕ್ರವಾರ ಬೆಳಿಗ್ಗೆ ಕದನ ವಿರಾಮ ಪ್ರಾರಂಭವಾಗಿದೆ. ಗಾಝಾದ 2.3 ಮಿಲಿಯನ್ ಪ್ಯಾಲೆಸ್ತೀನಿಯನ್ನರಿಗೆ ಕೇಳಿಸುತ್ತಿದ್ದ 7 ವಾರಗಳ ನಿರಂತರ ಇಸ್ರೇಲ್‌ ಬಾಂಬ್ ದಾಳಿಯ ಶಬ್ಧಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.  ಇಸ್ರೇಲ್‌ ಬಾಂಬ್‌ ದಾಳಿಗೆ ಗಾಝಾದಲ್ಲಿ 15,000ಕ್ಕೂ ಅಧಿಕ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದು, 40,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಬಿಡುಗಡೆಯಾದ ಇಸ್ರೇಲ್‌ ಒತ್ತೆಯಾಳುಗಳಲ್ಲಿ 8 ಮಹಿಳೆಯರು ಸೇರಿದ್ದಾರೆ. ಅವರಲ್ಲಿ 6 ಮಂದಿ 70 ಮತ್ತು 80ರ ವಯಸ್ಸಿನವರು. ಮೂವರು ಮಕ್ಕಳು ಸೇರಿದ್ದಾರೆ. ಪ್ಯಾಲೆಸ್ತೀನ್‌ ಕೈದಿಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದ್ದು,  ಅವರಲ್ಲಿ 24 ಮಹಿಳೆಯರಿದ್ದಾರೆ. ಇಸ್ರೇಲ್‌ ಪಡೆಗಳ ಮೇಲಿನ ದಾಳಿಗಾಗಿ ಕೊಲೆ ಯತ್ನದ ಅಪರಾಧದಲ್ಲಿ ಸೆರೆಯಾದವರು ಮತ್ತು 15 ಮಂದಿಗೆ ಕಲ್ಲೆಸೆದ ಅಪರಾಧಕ್ಕೆ ಸಂಬಂಧಿಸಿ ಜೈಲು ಪಾಲಾದವಾರಾಗಿದ್ದಾರೆ.

ಹೆಚ್ಚಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಕದನ ವಿರಾಮವನ್ನು ವಿಸ್ತರಿಸಬಹುದು ಎಂದು ಇಸ್ರೇಲ್ ಹೇಳುತ್ತದೆ. ಆದರೆ ಕದನ ವಿರಾಮ ಮುಗಿದ ನಂತರ ತನ್ನ ಆಕ್ರಮಣವನ್ನು ಪುನರಾರಂಭಿಸುವುದಾಗಿ ಇಸ್ರೇಲ್‌ ಪ್ರತಿಜ್ಞೆ ಮಾಡಿದೆ. ಇದು ಸಂಘರ್ಷವನ್ನು ಕೊನೆಗಾಣಿಸಲು ಒಪ್ಪಂದವು ಅಂತಿಮವಾಗಿ ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ಮರೆಮಾಡಿದೆ.

ಶುಕ್ರವಾರ ರಾತ್ರಿ ಈಜಿಪ್ಟ್‌ನ ರಾಫಾ ಕ್ರಾಸಿಂಗ್ ಮೂಲಕ ಗಾಝಾದಿಂದ ಆಂಬ್ಯುಲೆನ್ಸ್‌ಗಳು ಸಾಲು ಸಾಲಾಗಿ ಬಂದಿದೆ. ಆಂಬ್ಯುಲೆನ್ಸ್‌ ಬಿಡುಗಡೆಯಾದ ಒತ್ತೆಯಾಳುಗಳನ್ನು ಹೊತ್ತೊಯ್ಯುತ್ತದೆ ಎಂದು ಈಜಿಪ್ಟ್‌ನ ಸರ್ಕಾರಿ ಅಲ್-ಖಹೆರಾ ಟಿವಿ ಲೈವ್ ತಿಳಿಸಿದೆ. ಇಸ್ರೇಲ್‌ನ ಟಿವಿ ವಾಹಿನಿಯೊಂದು ವಯಸ್ಸಾದ ಮಹಿಳೆಯು ಚಿಕ್ಕ ಬಾಲಕಿಯ ಜೊತೆಗೆ ಆಂಬ್ಯುಲೆನ್ಸ್‌ನಿಂದ ನಿರ್ಗಮಿಸುತ್ತಿರುವುದನ್ನು ತೋರಿಸಿದೆ. ಒತ್ತೆಯಾಳುಗಳು ಇಸ್ರೇಲ್‌ಗೆ ಹಿಂತಿರುಗಿದ್ದಾರೆ ಮತ್ತು ಕುಟುಂಬದ ಜೊತೆ ಸೇರುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ದೃಢಪಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!