Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ರೆಪ್ಕೋ ಗೃಹ ಸಾಲ ಮೇಳ : ಜನಸಾಮಾನ್ಯರ ಸ್ವಂತ ಮನೆ ನಿರ್ಮಾಣ ಕನಸು ಸಾಕಾರಕ್ಕೆ ಸಹಕಾರ

ಬಡ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆ ನಿರ್ಮಾಣದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಂಡ್ಯದ ರೆಪ್ಕೋ ಹೋಮ್ ಫೈನಾನ್ಸ್ ಉಪ ಶಾಖೆಯಲ್ಲಿ ಒಂದು ವಾರಗಳ ಕಾಲ ಗೃಹ ಸಾಲ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರಂಜಿತ್ ಶೆಟ್ಟಿ ತಿಳಿಸಿದರು.

ಅಶೋಕ ನಗರದ ಎರಡನೇ ಕ್ರಾಸ್ ನಲ್ಲಿ ಸಂಸ್ಥೆಯ ಉಪ ಶಾಖಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಲ ಪಡೆದು ಸ್ವಂತ ಮನೆ ನಿರ್ಮಾಣ ಮಾಡಲು ಇಚ್ಚಿಸಿರುವ ಜನತೆ ಸಾಲ ಮೇಳ ಸದುಪಯೋಗ ಪಡಿಸಿಕೊಳ್ಳಬೇಕು. ಮನೆ ನಿರ್ಮಾಣ, ಖರೀದಿ, ನವೀಕರಣ, ನಿವೇಶನ ಖರೀದಿ. ವಾಣಿಜ್ಯ ಉದ್ದೇಶ ನಿರ್ಮಾಣ ಹಾಗೂ ಅಡಮಾನ ಸಾಲ ನೀಡಲಾಗುವುದು, ಮೇಳದಲ್ಲಿ ದಾಖಲಾತಿ ಪರಿಶೀಲಿಸಿ ಅತಿ ಶೀಘ್ರದಲ್ಲಿ ಸಾಲ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

ಬೆಂಗಳೂರು – ಮೈಸೂರು ನಗರಗಳ ಮಧ್ಯೆ ಇರುವ ಮಂಡ್ಯ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮ ವಹಿವಾಟು ಹೆಚ್ಚಾಗಿದ್ದು, ಇಲ್ಲಿನ ಜನತೆಗೆ ಸ್ವಂತ ಮನೆ ನಿರ್ಮಿಸಿಕೊಳ್ಳಬೇಕೆಂಬ ಆಸೆ ಹೆಚ್ಚಾಗಿದೆ, ಇದಕ್ಕೆ ನಮ್ಮ ಸಂಸ್ಥೆ ಸಹಕಾರಿಯಾಗಿ ನಿಲ್ಲಲಿದೆ. ಗೃಹ ಸಾಲ ಮೇಳದ ಸುವರ್ಣ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ರೆಪ್ಕೋ ಸಂಸ್ಥೆಯ ಯೋಜನೆ ಜಿಲ್ಲೆಯ ಪ್ರತಿ ಮನೆಗೂ ತಲುಪಬೇಕು, ಆ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡ ಲಿದ್ದಾರೆ, ರೆಪ್ಕೋ ಸಂಸ್ಥೆ ದೇಶದ ಎಲ್ಲಾ ರಾಜ್ಯಗಳಲ್ಲೂ ಶಾಖೆಗಳಿರುವ ಸಂಸ್ಥೆ 12300 ಕೋಟಿ ವಹಿವಾಟು ಹೊಂದಿದೆ. ಪಾರದರ್ಶಕ ಸಾಲ ವ್ಯವಸ್ಥೆ ಇದ್ದು, ಸಂಸ್ಥೆಯ ಬೆಳವಣಿಗೆಗೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಂದು ಹೇಳಿದರು.

ಮಂಡ್ಯ ಉಪ ಶಾಖೆ ಕಚೇರಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಲಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ರಾಮನಗರ ಮತ್ತು ಕನಕಪುರದಲ್ಲಿ ಶಾಖೆ ಆರಂಭಿಸುವುದಾಗಿ ತಿಳಿಸಿದರು.

ಸಂಸ್ಥೆಯ ಮುಖ್ಯ ಮಾಹಿತಿ ಅಧಿಕಾರಿ ಹಾಗೂ ಪ್ರಧಾನ ವ್ಯವಸ್ಥಾಪಕ ಕೆ. ಪಾಂಡ್ಯ ರಾಜನ್ ಉಪಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿ. ಜನತೆಗೆ ಮನೆ ನಿರ್ಮಿಸಿಕೊಳ್ಳಲು ಸಾಲ ನೀಡುವ ಪ್ರಮುಖ ಉದ್ದೇಶ ಹೊಂದಿರುವ ರೆಪ್ಕೊ ಸಂಸ್ಥೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಗ್ರಾಹಕರು ಮತ್ತು ಸಂಸ್ಥೆಯ ಸಂಬಂಧ ಗಟ್ಟಿಗೊಳ್ಳಬೇಕಾಗಿದೆ ಎಂದು ಹೇಳಿದರು

ಸಂಸ್ಥೆಯ ಮೈಸೂರು ಶಾಖೆ ಮುಖ್ಯ ವ್ಯವಸ್ಥಾಪಕ ಮಗೇಶ್ ಕುಮಾರ್ ಎಸ್, ಮಂಡ್ಯ ಉಪ ಶಾಖೆ ವ್ಯವಸ್ಥಾಪಕ ವಿಜಯ್ ಸಂದೀಪ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!