Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೂಳೆ ಕ್ಯಾನ್ಸರ್ ; ಬಾಲಕಿಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಮನವಿ

ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ನೆರವು ನೀಡುವಂತೆ ಪೋಷಕರಾದ ಹೇಮಾ ಹಾಗೂ ಹಿತೈಷಿಯಾದ ಸೋಮಶೇಖರ್ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಇವರ ಮಗಳು ವಿನುತಾ (15) ಮೂಳೆ ಕ್ಯಾನ್ಸರ್ ಇರುವುದಾಗಿ ಕಂಡು ಬಂದಿದ್ದು, ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದರು.

ಈಗಾಗಲೇ ದಾನಿಗಳ ಸಹಾಯದಿಂದ ಮಗಳ ಚಿಕಿತ್ಸೆಗೆ 20 ಲಕ್ಷ ರೂ ವೆಚ್ಚ ಮಾಡಿದ್ದು, ಮತ್ತೆ ನೋವು ಕಂಡದ್ದರಿಂದ ಪರೀಕ್ಷೆ ಮಾಡಲಾಗಿ, ನಾರಾಯಣ ಹೃದಯಾಲಯದ ವೈದ್ಯರು ಮರು ಶಸ್ತ್ರ ಚಿಕಿತ್ಸೆಗೆ ಒಳ ಪಡಿಸುವಂತೆ ಹೇಳಿದ್ದಾರೆ. ಇದಕ್ಕೆ ಸುಮಾರು 2 ಲಕ್ಷ ರೂ ತಗುಲಲಿದ್ದು ದಾನಿಗಳು ಸಹಾಯಾಸ್ತ ನೀಡುವಂತೆ ಮನವಿ ಮಾಡಿದ್ದಾರೆ.

ಸಹಾಯ ಮಾಡಲು ಇಚ್ಚಿಸುವವರು ಹೇಮಾ ( ವಿನುತ ಅವರ ತಾಯಿ) ಹೆಸರಿನ ಶ್ರೀರಂಗಪಟ್ಟಣ ಬ್ರಾಂಚ್ ನ ಕೆನರಾ ಬ್ಯಾಂಕ್ ಖಾತೆ 7092500101895101, IFSC ಸಂಖ್ಯೆ KARB0000709 ಗೆ ಅಥವಾ 7090221842 ಸಂಖ್ಯೆಗೆ ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಧನ ಸಹಾಯ ಮಾಡುವಂತೆ ಕೋರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ