Saturday, November 21, 2026

ಪ್ರಾಯೋಗಿಕ ಆವೃತ್ತಿ

ನುಡಿ ಹಬ್ಬ | ಸಮ್ಮೇಳಾನಾಧ್ಯಕ್ಷರಾಗಿ ವಾಟಾಳ್ ನಾಗರಾಜ್ ಆಯ್ಕೆಗೆ ಒತ್ತಾಯ

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿ ನೆಲ ಜಲ ಕನ್ನಡಿಗರ ಸಂರಕ್ಷಣೆ ಉದ್ಯೋಗಕ್ಕಾಗಿ ಹಿಂದಿ ಹೇರಿಕೆ, ಮಹಾಜನ್ ವರದಿ ಜಾರಿಗಾಗಿ, ಕಾವೇರಿ, ಮಹಾದಾಯಿ ನೀರಿನ ಸಮಸ್ಯೆ ಬಂದಾಗ, ಕನ್ನಡಕ್ಕೆ ಧಕ್ಕೆ ಬಂದ ಸಂದರ್ಭ ಸೇರಿದಂತೆ ಇತರ ಹೋರಾಟಗಳಲ್ಲಿ ವಾಟಾಳ್ ನಾಗರಾಜ್ ಅವರು ಸಾಕಷ್ಟು ಸೇವೆ ಸಲ್ಲಿಸಿದ್ದು ಅವರಿಗೆ ಸಮ್ಮೇಳನಧ್ಯಕ್ಷ ಸ್ಥಾನ ನೀಡಿದರೆ ಕನ್ನಡಿಗರಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಕಸಪಾ ರಾಜ್ಯಾಧ್ಯಕ್ಷ ಮಹೇಶ್ ಜೊತೆ ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಬೇಜವಾಬ್ದಾರಿ ಉದ್ದಟತನದಿಂದ ನಡೆದುಕೊಳ್ಳುತ್ತಿದ್ದಾರೆ. ಮಂಡ್ಯ ಕಸಾಪ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡದೆ, ಸಮ್ಮೇಳನ ನಡೆಸಲು ಹೊರಟಿರುವುದು ಮಂಡ್ಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ದೂರಿದರು.

೨೦೨೫ ರ ಸಮ್ಮೇಳನವನ್ನು ರಾಜ್ಯಗಳ ಗಡಿಭಾಗದಲ್ಲಿ ನಡೆಸಬೇಕು, ಅಲ್ಲಿ ಕನ್ನಡಿಗರು ಪರಭಾಷಿಕರ ದಬ್ಬಾಳಿಕೆಯಿಂದ ತತ್ತರಿಸಿ ಹೋಗುತ್ತಿದ್ದಾರೆ, ಇಂತಹ ಕಡೆ ನಡೆಸಿದರೆ ಅವರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಸಲ್ಮಾನ್, ಆರಾಧ್ಯ ಗುಡಿಗೇನಹಳ್ಳಿ, ಉಮ್ಮಡಹಳ್ಳಿ ನಾಗೇಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ