Wednesday, September 11, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಿಲ್ಲೆಯಾದ್ಯಂತ ಬಸವ ಪಂಚಮಿ ಆಚರಿಸಲು ಮನವಿ

ನಾಗರಪಂಚಮಿಯ ದಿನದಂದು ಕಲ್ಲಿನ ನಾಗರಮೂರ್ತಿ ಹಾಗೂ ಹುತ್ತಕ್ಕೆ ಹಾಲೆರೆಯದೆ ಅಪೌಷ್ಠಿಕತೆಯಿಂದ ಬಳಲುವ ಬಡಮಕ್ಕಳಿಗೆ ಹಾಲುನೀಡುವ ಮೂಲಕ ಬಸವಪಂಚಮಿ ಆಚರಿಸಬೇಕೆಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಹಾಗೂ ಕಾಯಕಯೋಗಿ ಫೌಂಡೇಶನ್ ಎಂ ಶಿವಕುಮಾರ್ ಮನವಿ ಮಾಡಿದ್ದಾರೆ.

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಲಿಂಗೈಕ್ಯರಾದ ದಿನವನ್ನು ಮರೆಮಾಚುವ ಸಲುವಾಗಿ ನಾಗರಪಂಚಮಿಯ ಆಚರಣೆಯನ್ನು ಕೆಲವರು ಜಾರಿಗೆ ತಂದು ಧಾರ್ಮಿಕ ಮೌಢ್ಯತೆಯನ್ನು ಜನರ ಮನಸಿನಲ್ಲಿ ಮೂಡಿಸಿದ್ದಾರೆ. 1196ರ ಶ್ರಾವಣ ಶುದ್ಧ ಪಂಚಮಿಯಂದು ಕೂಡಲಸಂಗಮದಲ್ಲಿ ಗುರುಬಸವಣ್ಣನವರು ಲಿಂಗೈಕ್ಯರಾದ ದಿನದಂದು ಶರಣಪರಂಪರೆ ಕೊನೆಗಾಣಿಸುವ ಕುತಂತ್ರದಿಂದ ಮೌಢ್ಯಾಚರಣೆಯಾದ ನಾಗರಪಂಚಮಿಯನ್ನು ಮುನ್ನಲೆಗೆ ತರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಂಪ್ರದಾಯದಲ್ಲಿ ಶ್ರಾವಣ ಪಂಚಮಿಯಂದು ತವರುಮನೆಗೆ ತೆರಳುವ ಹೆಣ್ಣುಮಕ್ಕಳು ಅರಿವಿನ ಕೊರತೆಯಿಂದಾಗಿ ಕಲ್ಲುನಾಗರಮೂರ್ತಿ ಹಾಗೂ ಹುತ್ತಕ್ಕೆ ಹಾಲೆರೆಯುವ ಮೌಢ್ಯತೆಯನ್ನು ಇನ್ನೂ ಜೀವಂತವಾಗಿ ಉಳಿಸಿರುವ ಕೆಲವೊಂದು ವರ್ಗ ಶ್ರಮಿಕಸಮಾಜವನ್ನು ಶೋಷಣೆ ಮಾಡುತ್ತಲೇ ಬಂದಿದೆ. ಇಂತಹ ವ್ಯವಸ್ಥಿತ ಧಾರ್ಮಿಕಮೌಢ್ಯಾಚರಣೆ ಹೋಗಲಾಡಿಸಲು ಆಸ್ಪತ್ರೆಯ ರೋಗಿಗಳಿಗೆ, ಬಡಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ಹಾಲು ಪೌಷ್ಠಿಕ ಆಹಾರವನ್ನು ನೀಡುವ ಮೂಲಕ ಮಾನವೀಯತೆಯನ್ನು ಮರೆಯಬೇಕೆಂದು ಅವರು ಮನವಿ ಮಾಡಿದ್ದಾರೆ.

ಹಾವು ಹಾಲು ಕುಡಿಯೊದಿಲ್ಲ, ಅದರ ಅಹಾರ ಇಲಿ, ಕಪ್ಪೆ, ಹುಳಗಳು ಹಾಗು ಗಾಳಿ ಅಷ್ಟೆ. ಹಾವು ರೈತರಿಗೆ ಉಪಕಾರಿಯಾದ ಒಂದು ಜೀವಜಂತು, ಪೂಜೆಯ ನೆಪದಲ್ಲಿ ಕಲ್ಲನಾಗನಿಗೆ ಹಾಲನೆರೆದು ನಿಜವಾದ ಹಾವು ಬಂದರೆ ಕೊಲ್ಲುವುದು ಮತ್ತು ಹುತ್ತಕ್ಕೆ ಅರಿಷಿನ ಕುಂಕುಮಗಳಿAದ ಪೂಜಿಸಿ ಒಳಗೆ ಇರುವ ಹಾವಿಗೆ ತೊಂದರೆ ಕೊಡುವುದು ಸರಿಯಲ್ಲ. ಪೂಜೆ ಮತ್ತು ದೇವರ ಹೆಸರಿನಲ್ಲಿ ಅನ್ನದ ಹುಂಡೆಗಳನ್ನು, ಬೆಲೆಬಾಳುವ ರೇಷ್ಮೆ ವಸ್ತ್ರ ಮತ್ತು ತುಪ್ಪವನ್ನು ಹೋಮ ಕುಂಡದಲ್ಲಿ ಸುಡುವುದರಿಂದ ನಮ್ಮ ದೇಶದ ಅಹಾರ ಉತ್ಪಾದನೆಯ ಶೇ ೪೦ರಷ್ಟು ಅಹಾರ ವ್ಯರ್ಥವಾಗಿ ಹಾಳು ಮಾಡುತ್ತಿರುವುದು ಸಂವಿಧಾನ ವಿರೋಧಿ ಕ್ರಿಯೆಯಾಗಿದೆ ಎಂದು ತಿಳಿಸಿರುವ ಅವರು ಲಿಂಗಾಯತ ಮಹಾಸಭಾ ಹಾಗೂ ಬಸವಫೌಂಡೇಶನ್ ಕಾಯಕಯೋಗಿ ವತಿಯಿಂದ ನಾಗರಪಂಚಮಿಯ ದಿನದಂದ ಬಸವಪಂಚಮಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!