Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಿಮ್ಸ್ ಅಕ್ರಮಗಳ ತನಿಖೆಗೆ ಆದೇಶಿಸಲು ಪ್ರಗತಿಪರ ಸಂಘಟನೆಗಳ ಆಗ್ರಹ

ಮಂಡ್ಯ ಜಿಲ್ಲಾಸ್ಪತ್ರೆ ಲ್ಯಾಬ್ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿರುವುದರಿಂದ ಹೆಚ್ಚುವರಿ ಎರಡು ಲಕ್ಷ ಹೊರೆ ಬೀಳುತ್ತಿದ್ದು, ಇದನ್ನು ತಪ್ಪಿಸಲು ಮಿಮ್ಸ್ ವತಿಯಿಂದಲೇ ನಿರ್ವಹಿಸಬೇಕೆಂದು ಆಗ್ರಹಿಸಿದ ವಿವಿಧ ಸಂಘಟನೆಗಳ ಮುಖಂಡರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭದ್ರತಾ ಸೇವೆ ಒದಗಿಸಿರುವ ಕೆಎಸ್ಎಫ್ -9 ಸಂಸ್ಥೆ ನಕಲಿ ದಾಖಲೆ ಒದಗಿಸಿ ಟೆಂಡರ್ ಪಡೆದಿದ್ದೂ ಈ ಸಂಬಂದ ಚೆಸ್ಕಾಂ ನೀಡಿದ್ದ ಸೇವಾಪ್ರಮಾಣ ಪತ್ರವನ್ನು ಹಿಂಪಡೆದಿದ್ದರೂ ಈ ಏಜೆನ್ಸಿ ವಿರುದ್ದ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ನಕಲಿ ಭೋದನಾ ಪ್ರಮಾಣಪತ್ರ ನೀಡಿದ ವೈದ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಪ್ರಯತ್ನಕ್ಕೆ ತಡೆಹಾಕಿ, ನಕಲಿ ಭೋದನಾ ಪ್ರಮಾಣಪತ್ರದ ಕುರಿತು ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದರು.

ಈ ಎಲ್ಲ ಆಗ್ರಹಗಳ ಜಾರಿ ಸಂಬಂಧ ಅಧಿಕಾರಿಗಳು ಸಚಿವರು ಹಾಗೂ ಸಂಘಟನೆಗಳ ಪ್ರತಿನಿಧಿಗಳ ಉನ್ನತಮಟ್ಟದ ಸಭೆ ಆಯೋಜಿಸಬೇಕೆಂದು ಆಗ್ರಹಿಸಿ ಕರುನಾಡ ಸೇವಕರು ಸಂಘಟನೆ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಂಟಿಯಾಗಿ ಓ ಎ ರೋಹಿಣಿಯವರ ಮೂಲಕ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಷ್ಟ ಸಮಿತಿ ಪಕ್ಷದ ಅರುಣ್ ಕುಮಾರ್, ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ವಕೀಲ ಬಿ.ಟಿ.ವಿಶ್ವನಾಥ್ ಹಾಗೂ ಜೆ.ರಾಮಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!