Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಳಿಕಾಂಬ ಸ್ಲಂ ನಿವಾಸಿಗಳ ಪ್ರತಿಭಟನೆ

ಭಾರಿ ಮಳೆಗೆ ಕಾಳಿಕಾಂಭ ದೇವಾಲಯದ ಹಿಂದೆ ಇರುವ ಕಾಳಿಕಾಂಭ ಸ್ಲಂ ನಿವಾಸಿಗಳು ನಿದ್ದೆಯಿಲ್ಲದೆ ರಾತ್ರಿಗಳನ್ನು ಕಳೆಯುವಂತಾಗಿದೆ. ಕಾಳಿಕಾಂಬ ಶ್ರಮಿಕ ನಿವಾಸಿಗಳ ಮನೆ ನಿರ್ಮಾಣದ ಕೆಲಸವಂತೂ ನಿರಂತರವಾಗಿ ನೆನೆಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಳಿಕಾಂಬ ಸ್ಲಂ ನಿವಾಸಿಗಳು ಕರ್ನಾಟಕ ಜನಶಕ್ತಿ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು‌.

ಕರ್ನಾಟಕ ಜನಶಕ್ತಿಯ ಸಂಚಾಲಕ ಸಿದ್ದರಾಜು ಮಾತನಾಡಿ, ಕಾಳಿಕಾಂಬ ಸ್ಲಂ ಜನರಿಗೆ 20 ಗುಂಟೆ ಜಾಗದಲ್ಲಿ ಮನೆ ಕಟ್ಟಿ ಕೊಡಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ ಕಾಳಿಕಾಂಭ ಟ್ರಸ್ಟ್ ರವರು ಒಪ್ಪಂದದಂತೆ ಬಿಟ್ಟುಕೊಡದೆ ಸತಾಯಿಸುತ್ತಿದ್ದಾರೆ.

ಕಾಳಿಕಾಂಬ ಸ್ಲಂ ಪ್ರದೇಶವೆಂದು ಘೋಷಣೆಯಾಗಿರುವ ಜಾಗದಲ್ಲಿ ಟ್ರಸ್ಟ್ ನವರು ಕಲ್ಯಾಣ ಮಂಟಪ ಕಟ್ಟಿಕೊಂಡಿದ್ದು, ಆ ಜಾಗವನ್ನು ತೆರುವುಗೊಳಿಸಿ ನಮಗೆ ಆ ಸ್ಥಳದಲ್ಲಿ ಮನೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಳಿಕಾಂಬ ಸ್ಲಂ ನಿವಾಸಿಗಳ ಜೊತೆ ಒಪ್ಪಂದ ಮಾಡಿಕೊಂಡಂತೆ ಜಾಗವನ್ನು ಬಿಟ್ಟುಕೊಡಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಕಾಳಿಕಾಂಬ ಟ್ರಸ್ಟ್ ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ಪರಿಗಣಿಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ಈ ಸ್ಲಂ ಜನರಿಗೆ ಎರಡೂ ಕಡೆಗಳಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್ಡುಗಳ ಪರಿಸ್ಥಿತಿಯಂತೂ ಶೋಚನೀಯವಾಗಿದ್ದು, ಸಣ್ಣ ಮಳೆಯನ್ನೂ ಅವು ತಡೆಯುವ ಸ್ಥಿತಿಯಲ್ಲಿಲ್ಲ.ಬಿರುಮಳೆಗೆ ಶ್ರಮಿಕ ಜನರು ಬೀದಿಪಾಲಾಗಿದ್ದಾರೆ.

ಈ ಸ್ಥಿತಿಯಲ್ಲಿ ನಾವಿನ್ನೂ ಕಾಯುತ್ತಿರಲು ಸಾಧ್ಯವಿಲ್ಲ. ಕೂಡಲೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಕೆಲಸವನ್ನು ಸಚಿವರು, ಶಾಸಕರು ಮತ್ತು ಜಿಲ್ಲಾಡಳಿತ ಮಾಡಲೇಬೇಕು ಎಂದರು.

ಹಾಗೆಯೇ, ಮಂಡ್ಯ ಜಿಲ್ಲೆಯ ಇನ್ನೂ ಅನೇಕ ಶ್ರಮಿಕ ನಗರಗಳ ಸಮಸ್ಯೆಗಳು ದಿನೇ ದಿನೇ ಸಂಕೀರ್ಣಗೊಳ್ಳುತ್ತಿರುವುದನ್ನು ನಿಮ್ಮ ಗಮನಕ್ಕೂ ಹಲವು ಬಾರಿ ತಂದಿದ್ದು, ಇನ್ನೂ ಆ ನಿಟ್ಟಿನಲ್ಲಿ ನಿರ್ಣಾಯಕವಾದ ಕೆಲಸಗಳು ಆಗಿಲ್ಲ.

ನೀವು ಈಗಲಾದರೂ ಮಾನವೀಯತೆಯ ನೆಲೆಯಲ್ಲಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುತ್ತೀರೆಂದು ನಂಬಿದ್ದೇವೆ ಎಂದರು. ಮಹಿಳಾ ಮುನ್ನಡೆಯ ಪೂರ್ಣಿಮಾ, ಶಿಲ್ಪ, ಶ್ರಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಜನಾರ್ಧನ್, ರಾಜು, ಗಣೇಶ್ ಸೇರಿದಂತೆ ಹಲವರಿದ್ದರು.

ಇದನ್ನೂ ಓದಿ :  ಮಳೆಯಲ್ಲೂ ಮುಂದುವರಿದ ಶ್ರಮಿಕ ನಿವಾಸಿಗಳ ಪ್ರತಿಭಟನೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!