Sunday, September 8, 2024

ಪ್ರಾಯೋಗಿಕ ಆವೃತ್ತಿ

ಪರಿಷ್ಕೃತ NEET-UG ಫಲಿತಾಂಶ ಪ್ರಕಟ| ಟಾಪರ್‌ಗಳ ಸಂಖ್ಯೆ 61ರಿಂದ 17ಕ್ಕೆ ಇಳಿಕೆ

ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪರಿಷ್ಕೃತ ನೀಟ್-ಯುಜಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಪರಿಷ್ಕೃತ ಫಲಿತಾಂಶದಲ್ಲಿ ಟಾಪರ್‌ಗಳ ಸಂಖ್ಯೆಯು 61ರಿಂದ 17ಕ್ಕೆ ಇಳಿಕೆಯಾಗಿದೆ.

ಆರಂಭದಲ್ಲಿ ಟಾಪರ್‌ಗಳೆಂದು ಘೋಷಿಸಲ್ಪಟ್ಟ 67 ಅಭ್ಯರ್ಥಿಗಳಲ್ಲಿ ಒಟ್ಟಾಗಿ 44 ಅಭ್ಯರ್ಥಿಗಳು ಸಂಪೂರ್ಣ ಅಂಕವನ್ನು ಪಡೆದಿದ್ದರು. ನಿರ್ದಿಷ್ಟ ಭೌತಶಾಸ್ತ್ರ ವಿಷಯಕ್ಕೆ ಗ್ರೇಸ್ ಅಂಕ ನೀಡಿದ್ದರಿಂದ ಪೂರ್ಣ ಅಂಕಗಳನ್ನು ಈ ಅಭ್ಯರ್ಥಿಗಳು ಗಳಿಸಿದ್ದರು.

ಬಳಿಕ ಕೆಲವು ಕೇಂದ್ರಗಳಲ್ಲಿ ಸಮಯ ವ್ಯರ್ಥವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕಗಳನ್ನು ಹಿಂಪಡೆಯಲಾಗಿದ್ದು, ಟಾಪರ್‌ಗಳ ಸಂಖ್ಯೆಯು 67ರಿಂದ 61ಕ್ಕೆ ಇಳಿಕೆಯಾಗಿತ್ತು. ಇದೀಗ ಪರಿಷ್ಕೃತ ನೀಟ್-ಯುಜಿ ಫಲಿತಾಂಶ ಪ್ರಕಟವಾದ ಬಳಿಕ ಟಾಪರ್‌ಗಳ ಸಂಖ್ಯೆ 61ರಿಂದ 17ಕ್ಕೆ ಇಳಿಕೆಯಾಗಿದೆ.

ಫಲಿತಾಂಶದ ಪ್ರಕಾರ ಟಾಪ್ ಸ್ಕೋರರ್‌ಗಳು 99.9992714 ಪ್ರತಿಶತದೊಂದಿಗೆ ಪರಿಪೂರ್ಣ 720 ಅಂಕಗಳನ್ನು ಸಾಧಿಸಿದ್ದಾರೆ. ಪ್ರತಿ ಪ್ರಶ್ನೆಗೆ ಒಂದೇ ಒಂದು ನಿಖರವಾದ ಉತ್ತರವನ್ನು ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದಾಗಿ ಪರಿಷ್ಕೃತ ಫಲಿತಾಂಶದಲ್ಲಿ ಬದಲಾವಣೆ ಕಂಡುಬಂದಿದೆ.

ಇದರ ಪರಿಣಾಮವಾಗಿ ಈ ಹಿಂದೆ 720ಕ್ಕೆ 715 ಅಂಕ ಪಡೆದಿದ್ದ 44 ವಿದ್ಯಾರ್ಥಿಗಳು 720 ಅಂಕ ಪಡೆದವರ ಮತ್ತು 720ಕ್ಕೆ 716 ಅಂಕ ಪಡೆದ 70 ವಿದ್ಯಾರ್ಥಿಗಳ ನಂತರದ ಸ್ಥಾನವನ್ನು ಪಡೆದಿದ್ದಾರೆ.

ಮೇ 5ರಂದು ನಡೆಸಿದ ನೀಟ್‌-ಯುಜಿ ಪರೀಕ್ಷೆಯು 14 ಅಂತರಾಷ್ಟ್ರೀಯ ಸ್ಥಳಗಳನ್ನು ಒಳಗೊಂಡಂತೆ 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆಸಲಾಗಿದೆ. ಆದರೆ ಪರೀಕ್ಷೆಯ ವೇಳೆ ಸಮಯದ ನಿರ್ಬಂಧ ಎದುರಿಸಿದ 1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು-ಪರೀಕ್ಷೆ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!