Thursday, September 19, 2024

ಪ್ರಾಯೋಗಿಕ ಆವೃತ್ತಿ

ರೋಡ್ ರಾಬರ್ಸ್ ಇದ್ದಾರೆ…ಜನರೇ ಅಲರ್ಟ್ ಆಗಿರಿ..‌…

ಮಂಡ್ಯದಲ್ಲಿ ರಸ್ತೆ ರಾಬರಿ ಮಾಡುವ ಗ್ಯಾಂಗೊಂದು ಲಾಂಗ್ ಹಿಡಿದುಕೊಂಡು ಸ್ಕೂಟರ್ ನಲ್ಲಿ ದಾರಿಹೋಕರನ್ನು ಅಡ್ಡ ಹಾಕಿ ಹಣ,ಒಡವೆ ದೋಚುತ್ತಾ ಉಪಟಳ ನೀಡಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಕೆರಗೋಡು ಪೋಲಿಸರು ಬಂಧಿಸಿದ್ದಾರೆ.

ಜನವರಿ 31 ರಂದು ರಾತ್ರಿ 7.30 ಸಮಯದಲ್ಲಿ ಬೆಳ್ಳೂರಿನಿಂದ ಮಂಡ್ಯಕ್ಕೆ ಬರುತ್ತಿದ್ದ ಗ್ಯಾಸ್ ಏಜೆನ್ಸಿಯೊಂದರ ಮಾಲೀಕ ಮಹೇಶ್ ಎಂಬುವರು ಬರುತ್ತಿದ್ದಾಗ ಬಿ.ಹೊಸೂರು ಕಾಲೋನಿ ಬಳಿ ಮಾರುತಿ ಶಿಫ್ಟ್ ಕಾರನ್ನು ಅಡ್ಡಗಟ್ಟಿ ಕೆಲವರು ಜಗಳವಾಡುತ್ತಿದ್ದ ದೃಶ್ಯ ನಡೆಯುತ್ತಿತ್ತು.

ಮಹೇಶ್ ಅವರು ಬಿಳಿದೇಗಲು ಬಳಿ ಬಂದಾಗ ಶಿಫ್ಟ್ ಕಾರು ಸ್ಪೀಡಾಗಿ ನನ್ನ ಕಾರಿನ ಮುಂದೆ ಹಾದುಹೋಯಿತು. ಹಿಂದೆಯೇ ಮೂರು ಬೈಕ್ ಗಳಲ್ಲಿ ಬಂದ ಯುವಕರಲ್ಲಿ ಹೋಂಡಾ ಡಿಯೋ ಬೈಕ್( ಕೆಎ 11 ಇಎಸ್ 3339) ನಲ್ಲಿದ್ದ ಇಬ್ಬರು ಯುವಕರು ಮಹೇಶ್ ಅವರ ಕಾರು ಅಡ್ಡಗಟ್ಟಲು ಮುಂದಾದರು.ಆಗ ಮಹೇಶ್ ಅವರ ಕಾರಿನ ಮೇಲೆ ಲಾಂಗ್ ಬೀಸಿದ್ದಾರೆ.

ಜೀಗುಂಡಿಪಟ್ಟಣದ ಬಳಿ ಬಂದಾಗ ಕಂಠಪೂರ್ತಿ ಕುಡಿದಿದ್ದ ಇಬ್ಬರೂ ಮತ್ತೆ ಕಾರಿಗೆ ಲಾಂಗ್ ಬೀಸಿದ್ದಾರೆ. ಆದರೆ ಮಹೇಶ್ ಅವರಿಂದ ತಪ್ಪಿಸಿಕೊಂಡು ಮಲ್ಲಿಗೆರೆ ರಸ್ತೆಗೆ ಕಾರು ಚಲಾಯಿಸಿ ಇಳಿದು ಲಾಂಗ್ ಹಿಡಿದ ಯುವಕರನ್ನು ಪ್ರಶ್ನೆ ಮಾಡುತ್ತಿದ್ದಂತೆ, ಸ್ಥಳದಲ್ಲಿದ್ದ ಗ್ರಾಮಸ್ಥರು ಮಹೇಶ್ ಅವರ ಬಳಿಗೆ ಓಡಿ ಬಂದಿದ್ದಾರೆ.

ಆಗ ಡಿಯೋ ಗಾಡಿಯಲ್ಲಿದ್ದ ಆಗಂತುಕರು ಎಸ್ಕೇಪ್ ಆಗಿದ್ದಾರೆ. ಇದೇ ವೇಳೆ ಪಟ್ಟು ಬಿಡದ ಮಹೇಶ್ ಅವರು ಅವರನ್ನು 4 ಕಿ.ಮೀ ಹಿಂಬಾಲಿಸಿ ವಿಡಿಯೋ ಮಾಡಿದ್ದಾರೆ. ನಂತರ ಮಂಡ್ಯ ಪೋಲಿಸರಿಗೆ ತಾವು ತೆಗೆದ ವೀಡಿಯೋ ನೀಡಿದ್ದಾರೆ. ಈ ಸಂಬಂಧ ಪೋಲಿಸರು ದೂರು ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

ಕಡಿವಾಣ ಹಾಕಲಿ
ಇತ್ತೀಚೆಗೆ ಮಂಡ್ಯದಲ್ಲಿ ರೋಡ್ ರಾಬರ್ಸ್‌ ಉಪಟಳ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಕತ್ತಲಾದ ಮೇಲೆ ಆಚೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯ ಪೋಲಿಸರು ಇಂತಹ ಪುಂಡ ರಸ್ತೆ ರಾಬರ್ಸ್ ಗಳ ಉಪಟಳಕ್ಕೆ ಕಡಿವಾಣ ಹಾಕಬೇಕಿದೆ.

ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕತ್ತಲಾದ ಮೇಲೆ ನೆಮ್ಮದಿಯಿಂದ ಹೊರಗೆ ಬರಲು ಭಯ ಪಡುವಂತಹ ಪರಿಸ್ಥಿತಿ ಬರುತ್ತದೆ. ರಾಬರಿ ಮಾಡುವ ಪುಂಡರಿಗೆ ಮಂಡ್ಯ ಪೋಲಿಸರು ತಕ್ಕ ಬುದ್ಧಿ ಕಲಿಸಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!