Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೋದಿ ಅಭಿಮಾನಿಗಳ ದೃಷ್ಟಿಯಲ್ಲಿ RSS ಸಹ ಗಂಜಿ ಗುಲಾಮ !

ಮೋದಿ ವಿರೋಧಿಸುವವರು, ಮೋದಿಯ ನಡೆಯನ್ನು ಪ್ರಶ್ನಿಸುವವರೆಲ್ಲ ಮೋದಿ‌ ಅಭಿಮಾನಿಗಳ ದೃಷ್ಟಿಯಲ್ಲಿ ಕಾಂಗಿ, ಗಂಜಿ, ಗುಲಾಮರು,‌ ಎಡಚರು,‌ ದೇಶ ದ್ರೋಹಿಗಳು ಆಗಿರುತ್ತಾರೆ.

ಕೆಲವು ವ್ಯಕ್ತಿಗಳು ಮೋದಿ ಅವರ ಅಭಿಮಾನಿಗಳಾಗಿದ್ದರೆ ಸಮಸ್ಯೆ ಅಲ್ಲ‌. ಬದಲಾಗಿ ಮೋದಿಜೀ ಅವರ ಅಂಧ ಭಕ್ತರಾಗಿರುವುದು ಸಮಸ್ಯೆ. ಹಾಗಾಗಿ ಮೋದಿಯವರನ್ನು ಪ್ರಶ್ನೆ ಮಾಡುವವರನ್ನೆಲ್ಲ ಒಂದೇ ಏಟಿಗೆ ಗುಲಾಮರನ್ನಾಗಿ ಮಾಡಿ ಬಿಡುತ್ತಾರೆ.

ಆದರೆ ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಮೋದಿಜಿ ಬಗ್ಗೆ ಆರ್ ಎಸ್ ಎಸ್ ಅಭಿಪ್ರಾಯ ಸಹ ಬದಲಾಗಿದೆ. ಆರ್ ಎಸ್ ಎಸ್ ಪ್ರಕಾರ ಮೋದಿಜೀ ಮತ್ತು ಅಮಿತ್ ಶಾ ಬಿಜೆಪಿ ಪಕ್ಷದ ಕಳಪೆ ಪ್ರದರ್ಶನದ‌ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸಿ‌ ಕೊಡಬೇಕಿತ್ತು. ಅದರಲ್ಲೂ ಸಹ ಮೈತ್ರಿ ಸರ್ಕಾರ ನಡೆಸಬೇಕಾದ ಕಾರಣ‌, ಅದಕ್ಕೆ ಸೂಕ್ತ ವ್ಯಕ್ತಿ ಆರ್ ಎಸ್ ಎಸ್ ಪ್ರಕಾರ ನಿತಿನ್ ಗಡ್ಕರಿ ಆಗಿದ್ದರು. ಈ ಬಗ್ಗೆ ಆರ್ ಎಸ್‌ಎಸ್ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿತ್ತು.

ಆದರೂ, ಸಹ ಮೋದೀಜಿ‌ ಬಿಜೆಪಿ ಪಕ್ಷದ ನೂತನ ಸಂಸದರ ಸಭೆಯನ್ನು‌ ಕರೆಯದೆ, ಕಳಪೆ ಪ್ರದರ್ಶನದ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸದೆ, ನೇರವಾಗಿ ಮೈತ್ರಿಕೂಟದ ಸಂಸದರ, ನಾಯಕರ ಸಭೆ ಕರೆದು ಆರ್ ಎಸ್ ಎಸ್ ಅಜೆಂಡಾವನ್ನು ಮೋದಿಜೀ ಸೋಲಿಸಿ ಅಧಿಕಾರ ಉಳಿಸಿಕೊಂಡರು. ಇದು ಆರ್ ಎಸ್ ಎಸ್ ಗೆ ಪಿತ್ತ‌ ಕೆರಳಿಸುವಂತೆ ಮಾಡಿದೆ.

ಯಾವುದೇ ಸಂಘಟನೆಗೆ, ಸಿದ್ದಾಂತಕ್ಕೆ ವ್ಯಕ್ತಿಗಳು ಮುಖ್ಯವಲ್ಲ, ಸಂಘಟನೆ ಮುಖ್ಯವಾಗಿರುತ್ತೆ. ಆದರೆ ಮೋದಿಜೀಗೆ ಕೇವಲ ಅಧಿಕಾರ ಮುಖ್ಯ. ಈ ಹಗ್ಗ-ಜಗ್ಗಾಟದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮೋದಿಜೀ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಆದರೆ ಇಷ್ಟು ದಿನ ಸೋಷಿಯಲ್ ಮೀಡಿಯಾದಲ್ಲಿ ದೇಶಭಕ್ತರ ಪೋಸು ನೀಡುತ್ತಿದ್ದ ಬಹಳಷ್ಟು‌ ಜನ ಇವತ್ತು ಆರ್ ಎಸ್ ಎಸ್ ಸಂಘಟನೆಯನ್ನು ಗಂಜಿ, ಗುಲಾಮ, ಕಾಂಗಿ ಎಂದುಕೊಂಡು ಬರೆಯುತ್ತಿರುವುದನ್ನು‌ ನೋಡಿದರೆ ಇವರು ಮೋದಿಜೀ ಅಭಿಮಾನಿಗಳಲ್ಲ‌, ಅವರ ಅಂಧಭಕ್ತರು ಅನ್ನಿಸದೆ ಇರದು‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!