Thursday, July 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪತ್ರಕರ್ತರ ವಿರುದ್ಧ ದರ್ಶನ್ ಅಭಿಮಾನಿಯ ಅಸಭ್ಯ ವರ್ತನೆ: ಎಸ್ಪಿಗೆ ದೂರು

ಪತ್ರಕರ್ತರಿಗೆ ಬೇರೆ ಕೆಲಸವಿಲ್ಲ. ದಿನವಿಡೀ ನಟ ದರ್ಶನ್ ಸುದ್ದಿ ತೋರಿಸುವುದೇ ಕೆಲಸವಾಗಿದೆ ಎಂದು ನಟ ದರ್ಶನ್ ಅಭಿಮಾನಿಯೊಬ್ಬ ಪತ್ರಕರ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಾಜ್ ಹಾಕಿ ಬೆದರಿಕೆ ಹಾಕಿರುವ ಘಟನೆ ಶುಕ್ರವಾರ ಮಂಡ್ಯ ನಗರದ ಪತ್ರಕರ್ತರ ಭವನದ ಬಳಿ ನಡೆದಿದೆ.

ಮಂಡ್ಯನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಭವನದ ಮುಂದೆ ಮಾತನಾಡುತ್ತಾ ನಿಂತಿದ್ದಾಗ ಅಲ್ಲಿಗೆ ಹಿರೋ ಹೊಂಡಾ ಸ್ಪೆಂಡ್ಲರ್(ಕೆಎ-11, ಇಜಿ-0217) ಬೈಕ್‌ನಲ್ಲಿ ಬಂದ ಅಪರಿಚಿತ ದರ್ಶನ್ ಅಭಿಯಾನಿಯೊಬ್ಬ ಅವಾಜ್ ಹಾಕಿದ್ದಾನೆ. ನಿಮಗೆ ಮಾಡಲು ಬೇರೆ ಕೆಲಸವಿಲ್ಲ. ನಮ್ಮ ದರ್ಶನ್ ಸುದ್ದಿಯನ್ನೇ ತೋರಿಸುತ್ತಿದ್ದೀರಾ? ಎಂದು ಬೆದರಿಕೆ ಜೊತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆದ್ದರಿಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡು ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ದೂರು ಸಲ್ಲಿಸಲಾಗಿದೆ.

ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಹಿರಿಯ ಪತ್ರಕರ್ತರಾದ ಡಿ.ಎಲ್.ಲಿಂಗರಾಜು, ಬಸವರಾಜಹೆಗ್ಗಡೆ, ಜೆ.ಎಂ.ಬಾಲಕೃಷ್ಣ, ಪ್ರವೀಣ್, ಪ್ರಶಾಂತ್, ರೋಹಿತ್, ನಂದನ್‌ಕುಮಾರ್, ವಿನೋದ್, ಗುರು, ನಂದೀಶ್, ಸುನೀಲ್, ಮೋಹನ್‌ರಾಜ್, ಪ್ರತಾಪ್, ಚಂದನ್, ತೇಜಸ್ವಿ, ಮಹೇಶ್ ಸೇರಿದಂತೆ ಮತ್ತಿತರರು ಎಸ್ಪಿಗೆ ದೂರು ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!