ಜೋಡೆತ್ತಿನ ಗಾಡಿ ಓಟದಂತಹ ಗ್ರಾಮೀಣ ಕ್ರೀಡೆಗಳು ಇಂದು ನಶಿಸುವ ಹಂತದಲ್ಲಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೌಡ ತಿಳಿಸಿದರು.
ಮಳವಳ್ಳಿಯ ಜಾಗ್ವರ್ ನೀಲಾಂಬರಿ ಯುವಕರ ಸಂಘದ ವತಿಯಿಂದ ನಡೆಯುತ್ತಿರುವ ಜೋಡಿ ಎತ್ತಿನ ಗಾಡಿ ಓಟದ ಸ್ಪಧೆ೯ಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೂ ಹಸುಗಳಿಗೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಜೋಡೆತ್ತಿನ ಗಾಡಿ ಓಟದಂತಹ ಗ್ರಾಮೀಣ ಕ್ರೀಡೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ನಡೆಯಬೇಕೆಂದು ಹೇಳಿದರು.
ಎಷ್ಟೇ ಆಧುನಿಕ ಉಪಕರಣ ಬಂದರೂ ಹಸುಗಳು ತನ್ನದೇ ಆದ ಶ್ರೇಷ್ಟತೆಯನ್ನು ಪಡೆದುಕೊಂಡಿದೆ. ಕ್ರೀಡೆಗಳನ್ನು ಉತ್ತೇಜಿಸಲು ಗ್ರಾಮೀಣ ಕ್ರೀಡೆ ಹಮ್ಮಿಕೊಂಡಿರುವ ಯುವಕರ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಸುನೀಲ್, ರಮೇಶ್, ಚೌಡಯ್ಯ ಸೇರಿದಂತೆ ಇತರರು ಇದ್ದರು. ಸ್ಪರ್ಧೆಯಲ್ಲಿ 58 ಜೋಡೆತ್ತು ಭಾಗವಹಿಸಿದ್ದವು.