Saturday, May 18, 2024

ಪ್ರಾಯೋಗಿಕ ಆವೃತ್ತಿ

ಬುದ್ದ, ಬಸವಣ್ಣ, ಅಂಬೇಡ್ಕರ್ ವೈಜ್ಞಾನಿಕ ಬರಹ ಇಂದಿನ ಅಗತ್ಯ

ಇಂದಿನ ಜನತೆಗೆ ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ವೈಜ್ಞಾನಿಕ ಸಾಹಿತ್ಯ, ಬರಹಗಳು ಅವಶ್ಯವಿದೆ, ಇವು ಮನುಷ್ಯ ಮತ್ತು ಸಮಾಜವನ್ನು ಬದಲಾವಣೆ ಮಾಡುವ ಸೈದ್ಧಾಂತಿಕ ಬದ್ಧತೆ, ಚೈತನ್ಯ ತುಂಬುವ ಶಕ್ತಿಯಿದೆ ಎಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಮಂಡಳಿ ಅಧ್ಯಕ್ಷ ಡಿ.ಎಸ್.ವೀರಯ್ಯ ನುಡಿದರು.

ಮಂಡ್ಯನಗರದ ಕಲಾಮಂದಿರದಲ್ಲಿ ಸಾಹಿತಿ ಕೆ.ರಾಜು ಅಭಿಮಾನಿಗಳ ಬಳಗ, ಕಾಡುಕೊತ್ತನಹಳ್ಳಿ ಇವರು ಆಯೋಜಿಸಿದ್ದ ”ಮಹಾತ್ಮರಲ್ಲಿ ಮಹಾತ್ಮ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್” ಹಾಗೂ ”ನೊಂದ ನುಡಿ” ಪುಸ್ತಕ ಬಿಡುಗಡೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸೈದ್ಧಾಂತಿಕ ಬದ್ಧತೆ ಹಾಗೂ ಹೋರಾಟಗಳು ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯರ ಶ್ರೇಯೋಭಿವೃದ್ಧಿ ಮಾಡುವ ಸಾಹಿತ್ಯವೆಂದರೆ ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳಾಗಿವೆ, ಎಂತಹ ಸಾಹಿತ್ಯ ಓದಬೇಕು ಎನ್ನುವುದು ಬಹಳ ಮುಖ್ಯ, ಸಾವಿರಾರು ವರ್ಷಗಳಿಂದ ನಾವು ನೋಡೆ ಇರುವಂತ ದೇವರು-ದೇವತೆಗಳ ಬಗ್ಗೆ, ನಾವು ನೋಡದೇ ಇರುವಂತಹ ವ್ಯಕ್ತಿಗಳ ಬಗ್ಗೆ ಓದುತೇವೆ, ಅವು ನಮ್ಮನ್ನು ಯಾವುತ್ತೂ ಉದ್ದಾರ ಮಾಡಲೇ ಇಲ್ಲ, ಅವು ನಂಬಿಕೆ ಅಷ್ಠೆ, ಆದರೆ ನಮ್ಮನ್ನು ಉದ್ದಾರ ಮಾಡಿದ ಸಾಹಿತ್ಯವೆಂದರೆ ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು, ಸಾಹಿತ್ಯಗಳು ಎಂದು ತಿಳಿಸಿದರು.

ಎಲ್ಲಾ ಸಾಹಿತ್ಯವು ನಿಂತ ನೀರಾದರೆ, ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು, ಸಾಹಿತ್ಯ, ಹರಿಯುವ ನೀರಾಗಿದೆ, ಜ್ಞಾನ, ವೈಜ್ಞಾನಿಕ ಚಿಂತನೆ ಹೆಚ್ಚಿಸುವ, ಬೆಳೆಕಿನ ಸುಜ್ಞಾನ ಸಾಗರವಾಗಿದೆ, ಸಮಾಜಕ್ಕೆ ಸದಾ ಲಾಭವನ್ನು, ಉದ್ದಾರವನ್ನು ಮಾಡುವ ಸಾಹಿತ್ಯವಾಗಿದೆ ಎಂದು ಹೇಳಿದರು.

ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಅಂಬೇಡ್ಕರ್ ಅವರನ್ನು ಕುರಿತು ಬೇಕಾದಷ್ಟು, ಪುಸ್ತಕಗಳು ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಬಂದಿವೆ, ಅಂಬೇಡ್ಕರ್ ಅವರು ಕೇವಲ ಭಾರತಕ್ಕಷ್ಟೇ ಅಲ್ಲ, ವಿಶ್ವದಲ್ಲೇ ಅತ್ಯಂತ ದೊಡ್ಡ ವಿದ್ವಾಂಸರು, ಪ್ರಪಂಚದ ಎಲ್ಲಾ ವಿಶ್ವ ವಿದ್ಯಾನಿಲಯಗಳು ಗೌರವಿಸುತ್ತವೆ ಎಂದು ತಿಳಿಸಿದರು.

ಪ್ರಪಂಚದ ದೊಡ್ಡ ವಿಶ್ವ ವಿದ್ಯಾನಿಲಯವಾದ ಕೊಲಂಬಿಯಾ ವಿಶ್ವವಿದ್ಯಾನಿಲಯವು ವಿಶ್ವದ ವಿದ್ವಾಂಸರ ಪಟ್ಟಿ ತಯಾರಿಸಲು ಮುಂದಾದಾಗ ಅಂಬೇಡ್ಕರ್ ಅವರ ಹೆಸರನ್ನೇ ಮೊದಲು ಪ್ರಕಟಿಸಿದೆ, ಆದರೆ ನಮ್ಮ ದೇಶದ ಜನತೆಗೆ, ವಿದ್ವಾಂಸರಿಗೆ ಅಂಬೇಡ್ಕರ್ ಜಾತಿ ಕಾಣುತ್ತದೆ ಹೊರತು, ಜ್ಞಾನ ಕಾಣುವುದಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಮಹಾಸ್ವಾಮೀಜಿ, , ಸಾಹಿತಿ ಕೆ.ರಾಜು ಕಾಡಕೊತ್ತನಹಳ್ಳಿ, ಮಕ್ಕಳ ಸಹಾಯವಾಣಿ ಸಂಸ್ಥೆ ಮುಖ್ಯಸ್ಥ ಮಿಕ್ಕೆರೆ ವೆಂಕಟೇಶ್, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್, ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಸವರಾಜು, ಸಾಹಿತಿ ಪ್ರೊ.ಮಾಯಿಗೌಡ, ನಿವೃತ್ತ ಪೊಲೀಸ್ ಅಧಿಕಾರಿ ವೀರಭದ್ರಯ್ಯ, ವೈದ್ಯರಾದ ಡಾ.ಮಾದೇಶ್, ಜಾನಪದ ಗಾಯಕ ಡಾ.ಮಹದೇವಸ್ವಾಮಿ, ಶಿಕ್ಷಕಿ ಆಶಾರಾಣಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!