Wednesday, July 24, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಅಭ್ಯರ್ಥಿಯಿಂದ ಮತಯಾಚನೆ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ಇಂದು ನಗರದ ಹಲವಡೆ ಪ್ರಚಾರ ನಡೆಸಿ ಮತಯಾಚಿಸಿದರು.

ಇಂದು ಬೆಳಿಗ್ಗೆ 5.30 ಯಿಂದ 9 ರವರೆಗೆ ಮಂಡ್ಯದ ಪಿಇಎಸ್ ಕಾಲೇಜು ಕ್ರೀಡಾಂಗಣ,ಸರ್ಕಾರಿ ಮಹಾವಿದ್ಯಾಲಯದ ಕ್ರೀಡಾಂಗಣ,ಜಿಲ್ಲಾಧಿಕಾರಿ ಕಚೇರಿ, ಸರ್.ಎಂ.ವಿ.ಕ್ರೀಡಾಂಗಣ, ಬಾಲಭವನ, ವಿ.ವಿ.ರಸ್ತೆ,ಸುಭಾಶ್ ನಗರದ ಶಿವನಂಜಪ್ಪ ಉದ್ಯಾನವನ ಸೇರಿದಂತೆ ಹಲವೆಡೆ ವಾಯುವಿಹಾರ ಮಾಡುತ್ತಿದ್ದ ಪದವೀಧರ ಮತದಾರರನ್ನು ಭೇಟಿ ಮಾಡಿದ ಹೆಚ್.ಕೆ.ರಾಮು ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಕೋರಿದರು.

ಜೆಡಿಎಸ್ ಗೆಲುವು ನಿಶ್ಚಿತವಾಗಿದ್ದು ಪದವೀಧರ ಮತದಾರರು ಮೊದಲ ಪ್ರಾಶಸ್ಯದ ಮತ ನೀಡಿ ನನ್ನ ಗೆಲುವಿಗೆ ಸಹಕಾರ ನೀಡುತ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಹುಟ್ಟೂರು ಮಂಡ್ಯ ಜಿಲ್ಲೆಯ ಹುಲ್ಲುಕೆರೆ.ಈ ಗ್ರಾಮದವನಾದ ನಾನು ಚುನಾವಣೆಗೆ ಈಗಾಗಲೇ ನನ್ನ ಹಿತೈಷಿಗಳು,ಮುಖಂಡರುಗಳು, ಸ್ನೇಹಿತರು,ಪದವೀಧರ ಮತದಾರರು ನನ್ನ ಬೆನ್ನಿಗೆ ನಿಂತಿದ್ದಾರೆ.

ಒಟ್ಟಾರೆ ಎಲ್ಲರ ಶ್ರಮ,ಸಹಕಾರದಿಂದ ಪ್ರಥಮ ಪ್ರಾಶಸ್ತ್ಯ ಮತಗಳಿಂದ ನನ್ನ ಗೆಲುವಿಗೆ ಸಹಕಾರಿ ಆಗುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ,ಲೋಕೇಶ್,ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ಅವರ ಬೆಂಬಲಿಗರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!