Friday, September 20, 2024

ಪ್ರಾಯೋಗಿಕ ಆವೃತ್ತಿ

ಎಸ್ ಎ ಪಾಮ್ಕೊ| ರೈತರೇ ಆರಂಭಿಸಿದ ಕಂಪನಿಯ ವಹಿವಾಟು ಮಂಡ್ಯದಲ್ಲಿ ಆರಂಭ

ಸುಸ್ಥಿರ ಕೃಷಿ,ರೈತ ಮತ್ತು ಗ್ರಾಹಕ ಹಿತ ಕಾಯುವಾ ಮಹತ್ವಾಕಾಂಕ್ಷೆಯಿಂದ ರೈತರುಗಳೇ ಆರಂಭಿಸಿದ ಎಸ್ ಎ ಪಾಮ್ಕೊ ಕಂಪನಿ ಯ ಮೊದಲ ವ್ಯಾಪಾರ ಘಟಕಕ್ಕೆ ಮಂಡ್ಯದಲ್ಲಿ ಚಾಲನೆ ದೊರೆತಿದೆ.

ಭಾರತ ಸರ್ಕಾರದ ಕಂಪನಿ ಕಾಯ್ದೆಯಡಿ ನೋಂದಣಿ ಅಗಿರುವ ಈ ಕಂಪನಿ ದೇಶಾದ್ಯಾಂತ ತನ್ನ ವ್ಯಾಪ್ತಿ ಹೊಂದಿದೆ, ಮಂಡ್ಯದ ರೈತರುಗಳೇ ಆರಂಭಿಸಿರುವ ಈ ಕಂಪನಿ ಕೃಷಿ ಹಾಗೂ ಇದರ ಸಂಬಂಧಿತ ವ್ಯವಹಾರ ನಡೆಸುವ ಗುರಿಯೊಂದಿಗೆ ತನ್ನ ಕಾರ್ಯ ಚಟುವಟಿಕೆ ರೂಪಿಸಿಕೊಂಡಿದೆ.

ಎಸ್ ಎ ಪಾಮ್ಕೊ ಕಂಪನಿಯ ಮೊದಲ ವ್ಯಾಪಾರ ಘಟಕವು ಮಂಡ್ಯದ ಗುತ್ತಲು ಕಾಲೋನಿಯ (ಕಾಕಶೆಡ್) ಬಸ್ ಪ್ರಯಾಣಿಕರ ತಂಗುದಾಣದ ಎದುರು ತೆರೆದಿದ್ದು ಕಳೆದ ನ.26ರ ಭಾನುವಾರದಂದು ವಿದ್ಯುಕ್ತವಾಗಿ ಗ್ರಾಹಕ ಸ್ನೇಹಿ ದಿನಸಿ ಅಂಗಡಿ ಹೆಸರಿನೊಂದಿಗೆ ಚಾಲನೆ ಗೊಂಡಿದೆ.

ರೈತರ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ಮಾರುಕಟ್ಟೆ ಒದಗಿಸುವ, ಶೋಷಣೆರಹಿತ ವ್ಯವಸ್ಥೆಯಡಿ ಖರೀದಿಸಿ ಗ್ರಾಹಕರಿಗೆ ಗುಣಮಟ್ಟದ ಪದಾರ್ಥಗಳನ್ನು ಯೋಗ್ಯ ಬೆಲೆಗೆ ದೊರಕಿಸಿಕೊಡುತ್ತ, ಕೃಷಿಯಲ್ಲಿ ಸುಸ್ಥಿರತೆ ಸಾಧಿಸಲು ರೈತರಿಗೆ ನೆರವಾಗುವ ಜೊತೆಗೆ ಸ್ವಸಹಾಯ ಹಾಗು ಯುವಕ ಯುವತಿ ಮಂಡಲಗಳಿಗೆ ಮಾರುಕಟ್ಟೆ ಜ್ಞಾನ ಹಾಗು ಕುಶಲತೆ ನೀಡಿ, ಅವರಿಂದಲೇ ಸಣ್ಣ ಸಣ್ಣ ಉದ್ಯಮ ಆರಂಭಿಸಲು ಅವಕಾಶ ಕಲ್ಪಿಸುವುದು, ಜೊತೆಗೆ ಅವರು ತಯಾರಿಸಿದ ಉತ್ಪನ್ನಗಳನ್ನು ಬೇಡಿಕೆ ಅನುಸಾರ ಖರೀದಿಸುವ ಆಶಯ ಎಸ್ ಕೆ ಪಾಮ್ಕೊ ಕಂಪನಿಯದ್ದಾಗಿದೆ. ಈ ವ್ಯಾಪಾರ ಘಟಕದ ಚಾಲನೆ ಕಾರ್ಯಕ್ರಮದಂದು ಗಣ್ಯರು ದಿನವಿಡೀ ಭೇಟಿ ನೀಡಿ ಶುಭ ಕೋರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!