Thursday, September 19, 2024

ಪ್ರಾಯೋಗಿಕ ಆವೃತ್ತಿ

ಸದಾಭಿರುಚಿಯ ಚಿತ್ರ ”ಲವ್ ಸ್ಟೋರಿ 1998”

ಯಾವುದೇ ಮುಜುಗರವಿಲ್ಲದೇ ಮನೆ ಮಂದಿಯೆಲ್ಲ ಕೂತು ವೀಕ್ಷಿಸಬಹುದಾದ ಸದಾಭಿರುಚಿಯ ಅಪ್ಪಟ ಕನ್ನಡ ಚಿತ್ರ ”ಲವ್ ಸ್ಟೋರಿ 1998”.

ಮೈಸೂರಿನ ಯಶ್ವಿನ್ ಸಿನಿ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಈ ಚಿತ್ರವು ಇದೇ ಡಿ.30ರಂದು ರಾಜ್ಯದಾದ್ಯಂತ ಬೆಳ್ಳಿ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ನಾಗರಾಜು ತಲಕಾಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

nudikarnataka.com

‘ಲವ್ ಸ್ಟೋರಿ 1998” ಬಗ್ಗೆ ವಿವರವಾಗಿ ತಿಳಿಸಿದ ಅವರು, ಇದೊಂದು ಸದಾಭಿರುಚಿಯ ಚಿತ್ರ. ಬಿ.ಇಡಿ ಕಾಲೇಜೊಂದರ ಪ್ರೇಮ ಕಥಾ ಹಂದರವನ್ನು ಒಳಗೊಂಡಿದ್ದು, ದಕ್ಷಿಣ ಭಾರತ ಚಿತ್ರರಂಗಕ್ಕೆ ಈ ಕಥೆ ಹೊಸದಾಗಿದೆ. ನೈಜ್ಯ ಘಟನೆಗಳನ್ನು ಆಧರಿಸಿ ರೂಪಿಸಿರುವ ಈ ಚಿತ್ರವನ್ನು ” ಭಾವನೆಗಳ ವಿನ್ಯಾಸ” ಎನ್ನಬಹುದು ಎಂದು ಹೇಳಿಕೊಂಡರು.

ಇದು ಬಿ.ಇಡಿ ಕಾಲೇಜಿನ ಟೀಚರ್ಸ್ ಟ್ರೈನೀಸ್ ಗಳ ಕಥೆಯಾಗಿರುವುದರಿಂದ ಹಾಲೀ ಟೀಚರ್ಸ್ ಗಳು, ನಿವೃತ್ತ ಟೀಚರ್ಸ್ ಗಳ ಹಾಗೂ ಟ್ರೈನೀಸ್ ಗಳಿಗೆ  ಆಪ್ತವಾಗುತ್ತದೆ. ಅವರಿ ತಮ್ಮ ಅನುಭವದ ನೆನೆಪುಗಳು ಮರುಗಳಿಸುತ್ತದೆ. ಚಿತ್ರದಲ್ಲಿ 6 ಹಾಡುಗಳಿದ್ದು, ಸುಭಾಷ್ ರಾಘವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕನಾಗಿ ಮಿಥುನ್, ನಾಯಕಿಯಾಗಿ ಕೃತಿಕ, ಖಳನಾಯಕನಾಗಿ ಕ್ರಿಶ್ ಅಭಿನಯಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ಚಿತ್ರದ ನಾಯಕ ಮಿಥುನ್, ಖಳನಾಯಕ ಕ್ರಿಶ್ ಮತ್ತು ಕುಮಾರಸ್ವಾಮಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!