Tuesday, September 17, 2024

ಪ್ರಾಯೋಗಿಕ ಆವೃತ್ತಿ

ಶೇ.62ರಷ್ಟು ಹೊಸ ಸೈನಿಕ ಶಾಲೆಗಳು ಸಂಘ ಪರಿವಾರ, ಬಿಜೆಪಿ ನಾಯಕರಿಗೆ ಹಸ್ತಾಂತರ !

ಕೇಂದ್ರ ಸರ್ಕಾರವು ಸುಮಾರು ಶೇ.62ರಷ್ಟು ಹೊಸ ಸೈನಿಕ ಶಾಲೆಗಳನ್ನು ಸಂಘ ಪರಿವಾರ ಮತ್ತು ಬಿಜೆಪಿ ನಾಯಕರಿಗೆ ಹಸ್ತಾಂತರಿಸಿದೆ ಎಂದು ರಿಪೋಟರ್ಸ್ ಕಲೆಕ್ಟಿವ್ ಬುಧವಾರ ವರದಿ ಮಾಡಿದೆ.

“ಕೇಂದ್ರ ಸರ್ಕಾರದ ಪತ್ರಿಕಾ ಹೇಳಿಕೆ ಮತ್ತು ಆರ್‌ಟಿಐನಿಂದ ಪಡೆದ ಮಾಹಿತಿ ಕಳವಳಕಾರಿಯಾಗಿದೆ. ನಮ್ಮ ವಿಚಾರಣೆಯಿಂದ ಸುಮಾರು 40ರಷ್ಟು ಅಂದರೆ ಶೇಕಡ 62ರಷ್ಟು ಸೈನಿಕ ಶಾಲೆಗಳನ್ನು ಆರ್‌ಎಸ್‌ಎಸ್‌, ಬಿಜೆಪಿ ನಾಯಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ” ಎಂದು ರಿಪೋಟರ್ಸ್ ಕಲೆಕ್ಟಿವ್ ವರದಿ ಹೇಳುತ್ತದೆ.

“ಸುಮಾರು ಶೇಕಡ 62ರಷ್ಟು ಸೈನಿಕ ಶಾಲೆಗಳನ್ನು ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್‌) ಮತ್ತು ಅದರ ಅಂಗ ಸಂಸ್ಥೆಗಳೊಂದಿಗೆ ನಂಟು ಹೊಂದಿರುವ ಶಾಲೆಗಳಿಗೆ ನೀಡಲಾಗಿದೆ. ಜೊತೆಗೆ ಬಿಜೆಪಿ, ಅದರ ಮಿತ್ರಪಕ್ಷ, ಅದರ ಹಿತೈಷಿಗಳು, ಹಿಂದುತ್ವ ಸಂಘಟನೆಗಳು, ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ” ಎಂದು ವರದಿ ಉಲ್ಲೇಖಿಸಿದೆ.

ಭಾರತದಲ್ಲಿ ಸೈನಿಕ ಶಾಲಾ ಶಿಕ್ಷಣ ವ್ಯವಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳಿಗೆ ಶಾಲೆಯನ್ನು ಹಸ್ತಾಂತರಿಸಲಾಗಿದೆ ಅಥವಾ “ಭಾಗಶಃ ಹಣಕಾಸಿನ ನೆರವು” ನೀಡಲು ಮತ್ತು ಅವರ ಶಾಖೆಗಳನ್ನು ನಡೆಸಲು ಸರ್ಕಾರವು ಅನುಮತಿಸಿದೆ ಎಂದು ವರದಿ ಹೇಳಿದೆ.

2021ರಲ್ಲಿ ಕೇಂದ್ರ ಸರ್ಕಾರವು ಭಾರತದಲ್ಲಿ ಸೈನಿಕ ಶಾಲೆಯನ್ನು ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡುವ ಅವಕಾಶವನ್ನು ನೀಡಿದೆ. ಆ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ದೇಶದಾದ್ಯಂತ ನೂರು ಹೊಸ ಸೈನಿಕ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!