ಮಂಡ್ಯ ನಗರದ ವಿವಿಧ ವಾರ್ಡ್ ಗಳಲ್ಲಿ ನಗರೋತ್ಥಾನ ಸೇರಿದಂತೆ ಹಲವು ಯೋಜನೆಗಳಡಿ ಕಾಮಗಾರಿಗಳು ನಡೆಯುತ್ತಿರುವುದು ಸರಿಯಷ್ಟೆ.
ಈ ಕಾಮಗಾರಿಗಳ ಸಂಧರ್ಭದಲ್ಲಿ ನಿಯಮಾನುಸಾರ ಕಾಮಗಾರಿಯ ವಿವರ, ಅಂದಾಜು ಪಟ್ಟಿ, ಕಾಮಗಾರಿ ಆರಂಭದ ಹಾಗೂ ಮುಕ್ತಾಯದ ಅವಧಿಯನ್ನು ನಮೂದಿಸುವುದು ಕಡ್ಡಾಯವಾಗಿದೆ ಎಂದು ಕರುನಾಡು ಸೇವಕರು ಸಂಘಟನೆಯ ಮುಖಂಡರಾದ ಎಂ.ಬಿ.ನಾಗಣ್ಣ ಗೌಡ ಮತ್ತು ನಗರಕೆರೆ ಜಗದೀಶ್ ಮಂಡ್ಯ ನಗರ ಸಭಾ ಆಯುಕ್ತರ ಗಮನಕ್ಕೆ ತಂದು, ಕಾಮಗಾರಿಯ ವಿವರಗಳ ನಾಮಫಲಕ ಆಳವಡಿಸುವಂತೆ ಒತ್ತಾಯಿಸಿದ್ದಾರೆ.
ಮಂಡ್ಯ ನಗರದ ಯಾವುದೇ ಕಾಮಗಾರಿ ಬಳಿ ಕಾಮಗಾರಿಯ ವಿವರದ ನಾಮಫಲಕ ಅಳವಡಿಸದಿರುವುದು ಅಶ್ಚರ್ಯಕರವಾಗಿದೆ.
ಈ ಕುರಿತು ಕ್ರಮವಹಿಸಬೇಕಿರುವ ನಗರಸಭೆಯ ಅಧಿಕಾರಿಗಳು ಮುಗುಮ್ಮಾಗಿರುವುದು ವಿಚಿತ್ರವಾಗಿದೆ ಎಂದು ಕರುನಾಡು ಸೇವಕರ ಸಂಘಟನೆಯ ಮುಖಂಡರು ಮಂಡ್ಯ ನಗರ ಸಭೆಯ ಆಯುಕ್ತರಿಗೆ ತಮ್ಮ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೆ ಹಾಲೀ ನಡೆಯುತ್ತಿರುವ ಕಾಮಗಾರಿಗಳ ಸ್ಥಳದಲ್ಲಿ ಕಾಮಗಾರಿ ವಿವರಗಳುಳ್ಳ ನಾಮಫಲಕ ಅಳವಡಿಸುವಂತೆ ಕೋರಿದ್ದಾರೆ.
ಇದರಿಂದಾಗಿ ಅಯಾ ವಾರ್ಡ್ ಗಳ ನಾಗರೀಕರಿಗೆ ತಮ್ಮ ವಾರ್ಡ್ ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮಾಹಿತಿ ಲಭಿಸುತ್ತದೆ.
ಜೊತೆಗೆ ಈ ಕಾಮಗಾರಿಗಳು ತಮ್ಮ ವಾರ್ಡ್ ಗೆ ಅಗತ್ಯತೆಯ ಬಗೆಯು ಅರಿವು ಮೂಡಿಸಲಿದೆ. ತಕ್ಷಣ ತಾವು ಈ ಕುರಿತು ಅಗತ್ಯ ಆದೇಶ ಹೊರಡಿಸಬೇಕು.
ಆದೇಶದ ನಂತರವು ನಾಮಫಲಕ ಅಳವಡಿಸದ ಕಾಮಗಾರಿಗಳ ಮಂಜೂರಾತಿ ಹಿಂಪಡೆಯುವಂತೆ ಕೋರಿದ್ದಾರೆ.