Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಯಾಂಟ್ರೋ ರವಿ ಮಾಹಿತಿ ಇನ್ನೂ ಐಟಿ, ಇಡಿಗೆ ತಲುಪಿಲ್ಲವೇ : ಕಾಂಗ್ರೆಸ್ ಪ್ರಶ್ನೆ

ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇಡಿ ಕಚೇರಿಗಳಿಗೆ ತಲುಪಿಲ್ಲವೇ? ಈ ಅಕ್ರಮ ಹಣದ ಮೂಲ ಹುಡುಕುವುದು ಇಡಿಗೆ ಇಷ್ಟವಿಲ್ಲವೇ ? ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.

“>

ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇಡಿ ಕಚೇರಿಗಳಿಗೆ ತಲುಪಿಲ್ಲವೇ? ಈ ಅಕ್ರಮ ಹಣದ ಮೂಲ ಹುಡುಕುವುದು ಇಡಿಗೆ ಇಷ್ಟವಿಲ್ಲವೇ ಅಥವಾ ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ?

ಇಡಿ ದಾಳಿ ಯಾವಾಗ ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ? ಇಡಿ ದಾಳಿ ಯಾವಾಗ ? ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ಕಾಲೆಳೆದಿದ್ದಾರೆ.

ಜನರು ರಾಜ್ಯ ಬಿಜೆಪಿ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆಂಬ ಗೊಂದಲದಲ್ಲಿದ್ದಾರೆ. ಸ್ಯಾಂಟ್ರೋ ರವಿ ಎಂಬಾತ ಪೊಲೀಸ್ ಅಧಿಕಾರಿ ತನಿಖೆಗೆ ಕರೆದರೆ ‘ತಾನು ಸಾಮಾಜ ಸೇವೆ ಮಾಡುತ್ತಿದ್ದು ಬರಲು ಸಾಧ್ಯವಿಲ್ಲ’ ಎನ್ನುತ್ತಾರೆ. ಈ ಸರ್ಕಾರದಲ್ಲಿ ವರ್ಗಾವಣೆ, ಪೋಸ್ಟಿಂಗ್ ಭ್ರಷ್ಟಾಚಾರವನ್ನು ಸಾಮಾಜ ಸೇವೆ ಎಂದು ಪರಿಗಣಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಮ್ಮ ರಾಜ್ಯದಲ್ಲಿರುವುದು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಕಳಂಕ ಬಂದಿದೆ. ಇವರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ವಿಧಾನಸೌಧ ತನ್ನ ಪಾವಿತ್ರ್ಯತೆ, ವೈಭವ ಕಳೆದುಕೊಂಡು ವಿಶ್ವದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಆಗಿದೆ ಕಿಡಿಕಾರಿದ್ದಾರೆ.

ವಿಧಾನಸೌಧ, ಕುಮಾರಕೃಪವೇ ಸ್ಯಾಂಟ್ರೋ ರವಿಯ ಕರ್ಮಭೂಮಿ! ಆಡಳಿತ ಪಕ್ಷದ ಮಂತ್ರಿಗಳು, ಅಧಿಕಾರಿಗಳೆಲ್ಲ ಈತನ ಜೇಬಿನಲ್ಲಿದ್ದಾರೆ. ಸಚಿವರೊಂದಿಗೆ ಸಹಕರಿಸಲು ಪತ್ನಿಗೆ ಕಿರುಕುಳ ಕೊಟ್ಟಿದ್ದನಂತೆ, ಯಾರು ಆ ಸಚಿವರು ? ಬೊಮ್ಮಾಯಿಯವರೇ ಹಾದಿ ಬೀದಿಯಲ್ಲಿರುವ ಅಕ್ರಮ ದಂಧೆಕೋರರು ಸರ್ಕಾರವನ್ನು ಅಲ್ಲಾಡಿಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!