Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಕ್ಷರದಾತೆ ಸಾವಿತ್ರಿಬಾಯಿ ಫುಲೆ ಸ್ಮರಣೆ ಅಗತ್ಯ : ನರಸಿಂಹಮೂರ್ತಿ

ಪ್ರಸ್ತುತ ದಿನಗಳಲ್ಲಿ ವಿದ್ಯಾವಂತ ಮಹಿಳೆಯರು ಅಕ್ಷರದಾತೆ ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸಿಕೊಳ್ಳಬೇಕಿದೆ ಎಂದು ಕರ್ನಾಟಕ ಸ್ವಾಭಿಮಾನಿ ಸಮ ಸಮಾಜದ ರಾಜ್ಯ ಅಧ್ಯಕ್ಷ ಎಚ್.ಎನ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ{ಕೆಎಸ್‌ಎಸ್}ದ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದೇಶದ ಮೊದಲ ಶಿಕ್ಷಕಿ ಯಾರು ಎಂದು ವಿದ್ಯಾವಂತ ಮಹಿಳೆಯನ್ನು ಕೇಳಿದರೆ ತಡವರಿಸುತ್ತಾರೆ, ಪೋಟೋದಲ್ಲಿರುವ ಸರಸ್ವತಿಯನ್ನು ವಿದ್ಯಾದಾತೆ ಎಂದು ಪಟ್ಟಭದ್ರ ಹಿತಶಕ್ತಿಗಳು ತಲೆಗೆ ತುಂಬಿಬಿಟ್ಟಿದ್ದಾರೆ, ವಿದ್ಯೆ ಕಲಿತ ಪ್ರತಿಯೊಬ್ಬ ಮಹಿಳೆಯರು ಫುಲೆ ದಂಪತಿಗಳನ್ನು ಮತ್ತು ಮಹಿಳಾ ಹಕ್ಕು ಕೊಡಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆದುಕೊಳ್ಳಬೇಕಿದೆ ಎಂದು ನುಡಿದರು.

ಶತ ಶತಮಾನಗಳಿಂದ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶವೇ ಇರಲಿಲ್ಲ, ಸಮಾಜದಲ್ಲಿ ಪ್ರಾಧ್ಯಾನ್ಯತೆಯೇ ಇರಲಿಲ್ಲ, ಸಾಕಷ್ಟು ಹಕ್ಕುಗಳೇ ಲಭ್ಯವಾಗಿರಲಿಲ್ಲ, ಇಂತಹ ಅನಿಷ್ಠ ಪದ್ದತಿಯನ್ನು ಹೋಗಲಾಡಿಸಿದ ಮಹಾಮಾನವತವಾದಿಗಳನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ಸಂಘಟನೆಯು ಮಹಿಳೆಯನ್ನು ಒಗ್ಗೂಡಿಸಿ, ಸಾಮಾಜಿಕ ಸುಧಾರಣೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಂಘಟಿಸುತ್ತಿದೆ, ಸದಸ್ಯತ್ವ ಪಡೆದು ಸ್ವಾಭಿಮಾನಿ ಬದುಕುಕಟ್ಟಿಕೊಂಡು ಉದ್ಯಮಿಯಾಗಿ-ಉದ್ಯೋಗಿಯಾಗು ಎನ್ನುವ ಘೋಷವಾಕ್ಯದೊಂದಿದೆ ಸಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜದ ಸಂಸ್ಥಾಪಕ ಅಧ್ಯಕ್ಷ ಡಾ. ಕುಮಾರಸ್ವಾಮಿ ಸಾಕ್ಯ, ಮಹಿಳಾ ಜಿಲ್ಲಾಧ್ಯಕ್ಷರಾದ ಸಿ.ಆರ್ ಮೀನಾಕ್ಷಿ, ದ್ರಾವಿಡ ಕನ್ನಡ ಚಳುವಳಿಯ ಅಭಿಗೌಡ ಹಾಗೂ ಕೆಎಸೆಸ್‌ನ ಪದಾಧಿಕಾರಿಗಳಾದ ಸ್ವಾಮಿ ಗುಡಿಗೆನಹಳ್ಳಿ, ಮಂಜುನಾಥ್ ಬಿಳಗುಲಿ, ಲೋಕೇಶ್ ಕಲ್ಲಳ್ಳಿ, ಡಾ. ಗಣೇಶ್, ಜಿಲ್ಲಾಧ್ಯಕ್ಷರಾದ ಚೌದರಿ, ಪ್ರದೀಪ್ ಎಚ್ ಡಿ, ಗಾಮನಹಳ್ಳಿ  ನಾಗೇಂದ್ರ, ರವಿ ಪಾಂಡವಪುರ, ಚೆಲುವರಾಜು ಹಾಗೂ ಜಕ್ಕನಹಳ್ಳಿ ಮತ್ತು ಚನ್ನನಕೆರೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ