Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರ್ಥಿಕ ಹಿಂದುಳಿದವರಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು ಕೃಷಿಕ್ ಸರ್ವೋದಯ ಫೌಂಡೇಶನ್ ವತಿಯಿಂದ ಪಿ.ಯು.ಸಿ, ಸ್ನಾತಕ, ವೃತ್ತಿಪರ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿದ್ಯಾಭ್ಯಾಸ ಮುಂದುವರಿಸಲು ಬಯಸುವ ರಾಜ್ಯದ ಗ್ರಾಮೀಣ ಪ್ರದೇಶದ ಆರ್ಥಿಕ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವರು ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವ್ಯವಸಾಯ ಆಧಾರಿತ ಕುಟುಂಬಗಳ (RTC) ಲಗತ್ತಿಸಬೇಕು, ಒಂದು ಹೆಕ್ವೆರ್‌ಗಿಂತ ಕಡಿಮೆ ಒಣ ಭೂಮಿಯುಳ್ಳ ಸಣ್ಣ/ಅತಿ ಸಣ್ಣ ವ್ಯವಸಾಯಗಾರರ ಮಕ್ಕಳಾಗಿರಬೇಕು (ಪಹಣಿ ಲಗತ್ತಿಸಬೇಕು), ವ್ಯವಸಾಯ, ಕೂಲಿ, ಕಾರ್ಮಿಕರ ಮಕ್ಕಳಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆಯಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರಬೇಕು.

ಮೇಲಿನಂತೆ ಅರ್ಹತೆಯುಳ್ಳ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು, ತಮ್ಮ ಅರ್ಜಿಗಳನ್ನು ಅಕ್ಟೋಬರ್ 31, 2023ರೊಳಗೆ ಕೃಷಿಕ್ ಸರ್ವೋದಯ ಫೌಂಡೇಶನ್ (ರಿ.), ನಂ. ನೇ ಹಂತ, ಗಾಲ್ಫ್ ಅವೆನ್ಯೂ ರಸ್ತೆ, ಕೋಡಿಹಳ್ಳಿ, ಬೆಂಗಳೂರು- 560 008 ಈ ವಿಳಾಸದಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080/25202299, ವೆಬ್-ಸೈಟ್ ವಿಳಾಸ:  www.ksfkarnataka.com ನೂತನ ವಿದ್ಯಾರ್ಥಿ ವೇತನ ಅರ್ಜಿ ಸಂಖ್ಯೆ- 01 ನ್ನು ನಮ್ಮ ವೆಬ್ ಸೈಟ್ ನಿಂದ ಡೌನ್‌ ಲೋಡ್ ಮಾಡಿಕೊಳ್ಳಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!