Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಭಿವೃದ್ದಿಗೆ ಎಸ್.ಡಿ. ಜಯರಾಂ ಕೊಡುಗೆ ಅಪಾರ: ಅಶೋಕ್

ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಮಾಜಿ ಸಚಿವ ಎಸ್.ಡಿ.ಜಯರಾಮ್ ಕೊಡುಗೆ ಅಪಾರ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ಜಯರಾಂ ಹೇಳಿದರು.

ಮಂಡ್ಯ ನಗರದ ಹೊಸಹಳ್ಳಿ ಸರ್ಕಲ್ ನಲ್ಲಿರುವ ಎಸ್ ಡಿ ಜಯರಾಮ್ ಆಟೋ ನಿಲ್ದಾಣದಲ್ಲಿ ಎಸ್ ಡಿ ಜಯರಾಮ್ ಅಭಿಮಾನಿಗಳು ಮತ್ತು ಹಿತೈಷಿಗಳು-ಆಟೋಚಾಲಕರು ಆಯೋಜಿಸಿದ್ದ ಮಾಜಿ ಸಚಿವ ಎಸ್ ಡಿ ಜಯರಾಮ್ ಅವರ ಜನ್ಮದಿನಾಚರಣೆ ಪ್ರಯುಕ್ತ ಆಟೋ ಚಾಲಕರಿಗೆ ಸಮವಸ್ತ್ರ ಮತ್ತು ಸಿಹಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ತಂದೆಯವರಾದ ಮಾಜಿ ಸಚಿವ ಎಸ್.ಡಿ.ಜಯರಾಂ ಅವರು, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಹೆಚ್ಚು ಮಹತ್ವ ನೀಡಿದ್ದರು, ಅವರ ಅವಧಿಯಲ್ಲಿ ಶಿಕ್ಷಣ, ಗ್ರಾಮೀಣಾಭಿವೃದ್ದಿ, ಶಾಲಾ-ಕಾಲೇಜು, ರಸ್ತೆಗಳ ಅಭಿವೃದ್ದಿ ಸಾಗರೋಪಾದಿಯಲ್ಲಿ ಸಾಗಿದವು ಎಂದು ನುಡಿದರು. ಅವರೊಂದಿಗೆ ಇದ್ದವರನ್ನು ಜನನಾಯಕರನ್ನಾಗಿ ಬೆಳೆಸಿದರು, ನಾಯಕತ್ವ ಗುಣ ತುಂಬಿ ಪ್ರೋತ್ಸಾಹಿಸುತ್ತಿದ್ದರು, ಸದಾ ಸ್ಮರಣೀಯ ಕಾರ್ಯಗಳನ್ನು ಮಾಡಿ, ಜನಮನ್ನಣೆಗಳಿಸಿದ್ದರು ಎಂದು ತಿಳಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಗಲ ಎಂ.ಲಂಕೇಶ್, ನಮ್ಮ ನಾಯಕರದ ಎಸ್.ಡಿ.ಜಯರಾಂ ಅವರನ್ನು ಜಿಲ್ಲೆ ಎಂದಿಗೂ ಮರೆಯದು, ಅವರ ಸೇವಕಾರ್ಯಗಳು ಅವರನ್ನು ಜೀವಂತವಾಗಿರುವಂತೆ ಸ್ಮರಿಸುತ್ತವೆ, ದೀನ ದಲಿತ ದುರ್ಬಲ ವರ್ಗದ ಜನರ ದನಿಯಾಗಿದ್ದರು.  ಇಂದು ಅವರ 74ನೇ ಜನ್ಮದಿನ ಆಚರಿಸಿ, ಸೇವಾಕಾರ್ಯದ ಮೂಲಕ ಸ್ಮರಿಸಿಕೊಳ್ಳುತ್ತಿದ್ಧೇವೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಲ್ಲಿ ಅವರ ಮಗ ಅಶೋಕ್ ಜಯರಾಂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ರಾಜಕೀಯ ಭವಿಷ್ಯ ಯಶಸ್ಸು ಕಾಣಲಿ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಕರವೇ ಮಾಜಿ ಅಧ್ಯಕ್ಷ ಕೆ.ಟಿ.ಶಂಕರೇಗೌಡ, ಕಸಾಪ ನಗರ ಘಟಕ ಅಧ್ಯಕ್ಷೆ ಸಿ.ಜೆ. ಸುಜಾತ ಕೃಷ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆಂಪರಾಜು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿವೇಕ್ ಮತ್ತು ಆಟೋ ಚಾಲಕರು ಮಾಲೀಕರಾದ ನಿಂಗಣ್ಣ, ಗಂಗ,ಸುರೇಶ್, ರಾಜೇಶ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!