Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೇವೆ ಮತ್ತು ಸ್ನೇಹ ಲಯನ್ಸ್ ಉದ್ದೇಶ

ಲಯನ್ಸ್ ಸಂಸ್ಥೆಯಲ್ಲಿ ಯಾವುದೇ ರೀತಿಯ ಜಾತಿ, ಧರ್ಮ,ವರ್ಣಭೇದಗಳಿಲ್ಲ. ಕೇವಲ ಸೇವೆ ಮಾಡುವಂತಹ ಮನೋಭಾವ ಹೊಂದಿರುವ ಸ್ನೇಹ ನಮ್ಮಲ್ಲಿದೆ. ಸೇವೆ ಮತ್ತು ಸ್ನೇಹ ಲಯನ್ಸ್ ಸಂಸ್ಥೆಯ ಉದ್ದೇಶ ಎಂದು ಜಿಲ್ಲಾ ಮಾಜಿ ರಾಜ್ಯಪಾಲ ಲಯನ್ ಎನ್.ಕೃಷ್ಣೇಗೌಡ ತಿಳಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಭವನದಲ್ಲಿ ನಡೆದ ಮಂಡ್ಯ ಬೆಳಕು ಲಯನ್ಸ್ ಕ್ಲಬ್ ನ 2022-23ನೇ ಸಾಲಿನ ಅಧ್ಯಕ್ಷ ಎ.ಶೇಖರ್ ಮತ್ತು ತಂಡದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ಸ್ ಸಂಸ್ಥೆಗೆ ಸದಸ್ಯರಾಗಿ ಹಲವರು ಸೇರುತ್ತಿದ್ದಾರೆ, ಸೇವೆ ಸಲ್ಲಿಸುವ ಉತ್ತಮ ಕಾರ್ಯಕ್ರಮಕ್ಕೆ ಹೆಚ್ಚು ಕೈಗಳು ಸೇರಿದರೆ ಒಗ್ಗಟ್ಟಾಗಿ ಇನ್ನಷ್ಟು ಉತ್ತಮ ಸೇವಾ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.

ನಾವೆಲ್ಲರೂ ನಮ್ಮದೇ ಆದಂತಹ ಜೀವನವನ್ನು ಕಟ್ಟಿಕೊಂಡಿದ್ದೇವೆ. ಆದರೆ ಹಿಂತಿರುಗಿ ನೋಡಿದಾಗ ಸಮಾಜದಲ್ಲಿ ನಮ್ಮ ಸ್ಥಾನಕ್ಕೆ ಬರಲಾಗದವರು, ಅವಕಾಶ ವಂಚಿತ ಜನರನ್ನು ದಿನನಿತ್ಯ ನೋಡುತ್ತೇವೆ. ಅವರಿಗೆ ಸೇವೆ ನೀಡುವ ಕಾರ್ಯ ಮಾಡುವುದು ಉತ್ತಮ ಕೆಲಸ ಎಂದು ಹೇಳಿದರು.

ಲಯನ್ಸ್ ಸಂಸ್ಥೆ ನಿರಂತರವಾಗಿ ಪ್ರಸ್ತುತದಲ್ಲಿ 200ಕ್ಕೂ ಹೆಚ್ಚಿನ ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. 50 ಸಾವಿರಕ್ಕೂ ಹೆಚ್ಚು ಸಂಸ್ಥೆಗಳಿವೆ. 14 ಲಕ್ಷಕ್ಕೂ ಹೆಚ್ಚಿನ ಲಯನ್ಸ್ ಸದಸ್ಯರುಗಳು ಪ್ರಪಂಚಾದ್ಯಂತ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.

ಇದೇ ವೇಳೆ ಲಯನ್ ಜಿ.ಎ.ರಮೇಶ್ ಮಾತನಾಡಿ, ಇದುವರೆಗೆ ಲಯನ್ಸ್ ಸಂಸ್ಥೆಗಳಿಂದ ಉಚಿತವಾಗಿ ಸುಮಾರು 93 ಲಕ್ಷ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ ಮರು ದೃಷ್ಟಿಯನ್ನು ಕೊಡಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಉತ್ತಮ ಶಿಕ್ಷಕರಿಗೆ, ಕ್ರೀಡಾ ಸಾಧಕರಿಗೆ, ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ಧನ ಸಹಾಯ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೆ.ಎಚ್ ಶ್ರೀಕಾಂತ್, ಎನ್.ಸುಬ್ರಮಣ್ಯ, ಎಚ್.ಕೆ.ಕಾಂತರಾಜು, ಎಂ.ಸಿ.ಭಾಸ್ಕರ್, ವಿ.ಹರ್ಷ ಕೆ.ಎಲ್ ರಾಜಶೇಖರ, ಆನಂದ್ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!