Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿದ್ದಗಂಗಾ ಚಾಂಪಿಯನ್ ಟ್ರೋಪಿ ಗೆದ್ದ ಮಂಡ್ಯದ ಕರಾಟೆ ಪಟುಗಳು

ಇತ್ತೀಚಿಗೆ ತುಮಕೂರಿನ ಸಿದ್ದಗಂಗಾ ಯೂನಿವರ್ಸಿಟಿಯಲ್ಲಿ ನಡೆದ 7 ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲೆಯ ಟೀಮ್ ವಿ. ಎಲ್.ಎಮ್. ಎ.ಎ ಸ್ಕೂಲ್, ಗೋಜುರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ ವಿದ್ಯಾರ್ಥಿಗಳು ಅತಿ ಹೆಚ್ಚು ಬಹುಮಾನಗಳಿಸಿ ತುಮಕೂರು ಸಿದ್ದಗಂಗಾ ಚಾಂಪಿಯನ್ ಟ್ರೋಪಿಯನ್ನು ಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರ,ಆಂಧ್ರ ಪ್ರದೇಶ, ತಮಿಳುನಾಡು, ಕೇರಳದ ವಿವಿಧ ಕರಾಟೆ ತಂಡದ ಸುಮಾರು ಐನೂರು ಕರಾಟೆಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಮಂಡ್ಯದಿಂದ 45 ಮಕ್ಕಳು ಭಾಗವಹಿಸಿ 17 ಪ್ರಥಮ, 20ದ್ವಿತೀಯ ಹಾಗೂ 5 ತೃತೀಯ ಬಹುಮಾನಗಳನ್ನು ಪಡೆದು ಟೀಮ್ ಚಾಂಪಿಯನ್ಶಿಪ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕರಾಟೆ ತರಬೇತುದಾರ ಲೋಕೇಶ್ ಮೊದಲಿಯಾರ್ ತಿಳಿಸಿದ್ದಾರೆ.

ಈ ಸ್ಪರ್ಧೆಯನ್ನು ತೂಕ ಹಾಗೂ ವಯಸ್ಸಿನ ಆಧಾರದಲ್ಲಿ ನಡೆಸಲಾಯಿತು. ಕಟಾ (ಕಾಲ್ಪನಿಕ ಯುದ್ಧ) ಹಾಗೂ ಕುಮಿಟೆ (ಫೈಟಿಂಗ್ ) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಪ್ರೇಮ್ ಕುಮಾರ್, ತರಬೇತುದಾರರಾಗಿ ಪ್ರತಾಪ್ ಕುಮಾರ್ ಬಸವಸಾಗರ, ಟೀಮ್ ಮ್ಯಾನೇಜರ್ ಆಗಿ ಹರ್ಷ, ವಿಷ್ಣು ಮೊದಲಿಯಾರ್ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಮಿಳುನಾಡಿನ ಈರೋಡಿನಲ್ಲಿ ನಡೆಯುವ ಸೌತ್ ಇಂಡಿಯನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!