Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಿವೃತ್ತ ಅಧಿಕಾರಿ ಸಿದ್ದರಾಮಪ್ಪಗೆ ಅಭಿನಂದನೆ

ಜಿಲ್ಲೆಯ ಯುವ ಜನರು ಯುವ ಪ್ರಶಸ್ತಿ ಪುರಸ್ಕೃತರು ನೆಹರು ಯುವಕ ಕೇಂದ್ರದ ಸ್ವಯಂಸೇವಕರು ಯುವಕ ಯುವತಿ ಮತ್ತು ಮಹಿಳಾ ಮಂಡಳಿ ಪದಾಧಿಕಾರಿಗಳು ಹಾಗೂ ಎಸ್ ಸಿದ್ದರಾಮಯ್ಯ ಅಭಿನಂದನಾ ಸಮಿತಿ ಆಶ್ರಯದಲ್ಲಿ ಮಂಡ್ಯದ ಗಾಂಧಿ ಭವನದಲ್ಲಿ ನೆಹರಿಯುವ ಕೇಂದ್ರದ ಉಪ ನಿರ್ದೇಶಕರಾಗಿ ಸೇವಾ ನಿವೃತ್ತಿ ಹೊಂದಿದ ಎಸ್ ಸಿದ್ದರಾಮಪ್ಪ ಅವರ ಅಭಿನಂದನಾ ಸಮಾರಂಭ ಯಶಸ್ವಿಯಾಗಿ ನಡೆಯಿತು.

ಸಮಾರಂಭವನ್ನು ಅಪರ ಜಿಲ್ಲಾಧಿಕಾರಿ ಡಾಕ್ಟರ್ ಎಚ್ ಎಲ್ ನಾಗರಾಜು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಜಿಲ್ಲೆಯಲ್ಲಿ ಕೆಲಸ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತಿಲ್ಲ ಅನೇಕ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಕ್ಕೆ ಆದರೆ ಯುವಕರನ್ನು ಸಮಾಜಮುಖಿಯಾಗಿ ಪರಿವರ್ತನೆ ಮಾಡಿದ್ದಕ್ಕಾಗಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.

ಸಮಾಜಕ್ಕೆ ಏನು ಕೊಡುಗೆ ನೀಡಬೇಕು ಸಮಾಜಕ್ಕೆ ನನ್ನ ಜವಾಬ್ದಾರಿ ಏನು ಎನ್ನುವ ಬಗ್ಗೆ ಯುವ ಸಮುದಾಯವನ್ನು ಸೂಕ್ಷ್ಮ ಸಂವೇದನ ಶೀಲರನ್ನಾಗಿ ಸಿದ್ದರಾಮಯ್ಯ ಅವರು ತಯಾರು ಮಾಡಿದ್ದಾರೆ ಅವರು ಜಿಲ್ಲೆಯಲ್ಲಿ ಉತ್ಕೃಷ್ಟವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದ ಕ್ಷೇಮವನ್ನು ಯಾರು ಬಯಸುತ್ತಾರೆ ಇನ್ನೊಬ್ಬರ ಕ್ಷೇಮಕ್ಕೆ ಯಾರು ಬದುಕುತ್ತಾರೆ ಇನ್ನೊಬ್ಬರ ಬದುಕಿಗೆ ಯಾರು ಮಾರ್ಗದರ್ಶನ ಮಾಡುತ್ತಾರೋ ಎನ್ನುವುದರ ಬಗ್ಗೆ ಚಿಂತನೆ ನಡೆಸಿದರೆ ಸಿದ್ಧರಾಮಪ್ಪನವರು ಸಮಾಜಕ್ಕೆ ಕ್ಷೇಮ ಉಂಟುಮಾಡುವುದನ್ನು ಕಲಿಸಿದ್ದಾರೆ ಎಂದು ನುಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ ಸಮಾಜದಲ್ಲಿ ಬಡವರನ್ನು ಮೇಲೆತ್ತುವ ಮನೋಭಾವವನ್ನು ಯುವಕರಲ್ಲಿ ಉಂಟುಮಾಡಿದ ಕೀರ್ತಿ ಸಿದ್ಧರಾಮಪ್ಪ ಅವರಿಗೆ ಸಲ್ಲುತ್ತದೆ ಎಂದರು.

ಯುವಕರಲ್ಲಿ ಸಿದ್ದರಾಮಪ್ಪ ಅವರು ನಾಯಕತ್ವದ ಗುಣಗಳನ್ನು ಬೆಳೆಸಿದ್ದಾರೆ ಹಲವಾರು ಯುವಕರು ನಿರುದ್ಯೋಗಿಗಳಾಗಿದ್ದರೂ ಸಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಇದಕ್ಕೆ ಸಿದ್ದರಾಮಪ್ಪ ಅವರೇ ಕಾರಣ ಹಾಗಾಗಿ ಇಂತಹ ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿ ಜನರ ಸೇವೆಗೆ ತಮ್ಮನ್ನು ಅರ್ಪಿಸಿ ಕೊಳ್ಳುವಂತೆ ನುಡಿದರು.

ಅಭಿನಂದನೆ ಸ್ವೀಕರಿಸಿ ಸಿದ್ದರಾಮಪ್ಪ ಅವರು ನಾನು 15 ವರ್ಷಗಳ ಕಾಲ ಮಂಡ್ಯದಲ್ಲಿ ಸೇವೆ ಸಲ್ಲಿಸಿದ್ದು ಅಂದು ತೋರುತ್ತಿದ್ದ ಪ್ರೀತಿಯನ್ನೇ ಇಂದು ಸಹ ತೋರಿಸಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಕ್ಷಯ ನಿಕೇತನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಸೂನ್ಗಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!