Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಾಜದ ಋಣ ತೀರಿಸುವೆ: ಎಸ್.ನಾಗರಾಜು

ನಮ್ಮ ಸಮಾಜದ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿರುವ ಎಲ್ಲಾ ಬಂಧುಗಳಿಗೆ ಧನ್ಯವಾದ ಅರ್ಪಿಸುತ್ತೇನೆ.ಅಲ್ಲದೆ ಸಮಾಜದ ಋಣ ತೀರಿಸುತ್ತೇನೆ ಎಂದು ಎಸ್. ನಾಗರಾಜು ತಿಳಿಸಿದರು.

ಮಂಡ್ಯದ ವಿ.ವಿ. ರಸ್ತೆಯಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಗಮದ ಚುನಾವಣೆಯಲ್ಲಿ ತಮ್ಮ ತಂಡಕ್ಕೆ ಆಶೀರ್ವಾದ ಮಾಡಿದ ಸಮಾಜದ ಎಲ್ಲಾ ಬಂಧುಗಳಿಗೆ ಆಭಾರಿಯಾಗಿದ್ದೇನೆ.173 ಮತಗಳ ಪೈಕಿ 170 ಮತಗಳನ್ನ ನೀಡಿದ್ದೀರಿ. ನಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬರದೇ ಇರುವ ರೀತಿಯಲ್ಲಿ, ಕಳೆದ 10 ವರ್ಷದಿಂದ ಸಹಕಾರ ಸಂಘವನ್ನು ಪಾಲನೆ ಮಾಡಿಕೊಂಡು ಬಂದಿದ್ದೇವೆ.ಮುಂದೆಯೂ ಅದೇ ರೀತಿ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.

ನಿಮ್ಮೆಲ್ಲರ ಸಹಕಾರದಿಂದ ಸ್ಥಾಪಿತವಾದ ಸಹಕಾರ ಸಂಘವು ಕಳೆದ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತ ಸಹಕಾರಿಯ ಅಭಿವೃದ್ಧಿಗೆ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ ತಮ್ಮೆಲ್ಲರ ವಿಶ್ವಾಸದೊಂದಿಗೆ ಬಲಿಷ್ಠವಾಗಿ ಮುನ್ನಡೆಯುತ್ತಿದೆ ಎಂದರು.

ಮೂರು ಬಾರಿ ನನ್ನನ್ನು ನಮ್ಮ ತಂಡವನ್ನು ಗೆಲ್ಲಿಸಿದ್ದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ.ಪ್ರಾಮಾಣಿಕವಾಗಿ ಸಮಾಜ ಸೇವೆಯನ್ನು ಮಾಡುತ್ತೇನೆ. ಯಾವುದಕ್ಕೂ ಹಿಂದೆ ಸರಿಯುವುದಿಲ್ಲ ಎಂದರು.

ಒಟ್ಟು 14 ಮಂದಿ ಸದಸ್ಯರುಗಳಲ್ಲಿ ಹೊನ್ನಮ್ಮ ಹಾಗೂ ಶಕುಂತಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದಂತೆ ಎಸ್. ಪಿ. ಉಮೇಶ್, ಬಿ. ದ್ಯಾವಣ್ಣ ಎನ್. ಎಸ್ ನವೀನ್ ಮಲ್ಲೇಶ್, ಸಿ.ಎಂ. ಪುಟ್ಟ ಬುದ್ಧಿ, ಎಂ. ಸಿ. ಮಹದೇವಯ್ಯ, ಎಸ್. ದೇವರಾಜಪ್ಪ, ಎ.ಸಿ. ಲಿಂಗದೇವರು, ವಿಶ್ವೇಶ್ವರಯ್ಯ ಹೆಚ್, ಶಿವಕುಮಾರ್ , ಶಿವಕುಮಾರ್ ಸ್ವಾಮಿ ಚುನಾಯಿತರಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!