Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಲ ಪಕ್ಷಗಳಿಂದ ಕೋಮು ಪ್ರಚೋದನೆ ರಾಜಕೀಯ

ಇಂದಿನ ಕೆಲವು ರಾಜಕೀಯ ಪಕ್ಷಗಳು ಕೋಮು ಪ್ರಚೋದನೆಗಾಗಿಯೇ ರಾಜಕೀಯ ಮಾಡುತ್ತಿವೆ ಎಂದು ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಕಾರ್ಯದರ್ಶಿ ಮುಕ್ತಾರ್ ಅಹ್ಮದ್ ಆರೋಪಿಸಿದರು.

ಮಂಡ್ಯ ನಗರದ ಹಾಲಹಳ್ಳಿಯಲ್ಲಿನ ನೂರಾನಿ ಮೊಹಲ್ಲಾದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಘಟಕ ಆಯೋಜಿಸಿದ್ದ ಪಕ್ಷದ 13ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನಾತ್ಮಕವಾಗಿರುವ ರಾಜಕೀಯ ಪಕ್ಷಗಳು ಜನ ಸಾಮಾನ್ಯರ ರಕ್ಷಣೆ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದನ್ನು ಬಿಟ್ಟು, ಜನಾಂಗೀಯ ದ್ವೇಷ, ಕೋಮು ಸೌಹಾರ್ದತೆಗೆ ಧಕ್ಕೆ, ಜೀವವಿರೋಧಿ ಕೃತ್ಯ, ಜನವಿರೋಧಿ ನೀತಿಗಳನ್ನು ಬೆಂಬಲಿಸುವ ಪಟ್ಟಭದ್ರ ಹಿತಸಕ್ತಿಯಾಗಿ ಬೆಳೆಯುತ್ತಿರುವುದು ದುರಂತ ಎಂದು ಎಚ್ಚರಿಸಿದರು.

ಎಸ್.ಡಿ.ಪಿ.ಐ ಪಕ್ಷ ಜನಸಾಮಾನ್ಯರ ಆಶೋತ್ತರಗಳ ಅಭ್ಯುದಯಕ್ಕಾಗಿ ಹೋರಾಡುತ್ತಿದೆ. ಸಂಘಟನೆ ಮಾಡಿ ರಾಜಕೀಯ ಪ್ರಜ್ಞೆ ಹೆಚ್ಚಿಸುತ್ತಿದೆ. ದೇಶವಾಳುವ ಸಾಮರ್ಥ್ಯದ ಬಗ್ಗೆ ಯುವಜನತೆ-ಮಹಿಳೆಯರಿಗೆ ಅರಿವು ಮೂಡಿಸುತ್ತಾ, ದಮನಿತ ಸಮುದಾಯಗಳ ಪರವಾಗಿ ಹೋರಾಡುತ್ತಿದ್ದು, ಇದಕ್ಕೆ ಎಲ್ಲರ ಶಕ್ತಿ,ಸಮಯ ಅವಶ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸಾದತ್‌ಪಾಷಾ, ಉಪಾಧ್ಯಕ್ಷ ಅಬ್ದುಲ್‌ರಹೀಂ, ಅಸ್ಮತ್ ಅಹಮದ್,ಮಹಿಳಾ ಅಧ್ಯಕ್ಷೆ ಮೊಹತ್‌ಬಾನು, ಫಾರುಖ್, ನೂರುಲ್ಲಾ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!