Saturday, September 21, 2024

ಪ್ರಾಯೋಗಿಕ ಆವೃತ್ತಿ

SSC ನೇಮಕಾತಿ| 384 ಹುದ್ದೆಗಳಿಗೆ ಅರ್ಜಿ ಆಹ್ವಾನ…ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ…

SSC (Staff Selection Commission) ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 2018, 2019ನೇ ಸಾಲಿನಲ್ಲಿ ಬಾಕಿ ಉಳಿದ 384 ಸೈನೋಗ್ರಾಫರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2018 2019ನೇ ಸಾಲಿನಲ್ಲಿ ಬಾಕಿ ಉಳಿದ 384 ಸ್ಟೆನೋಗ್ರಾಫರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖೆ ಹೆಸರು: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ – SSC

ಹುದ್ದೆಗಳ ಹೆಸರು: ಸೈನೋಗ್ರಾಫರ್ಸ್

ಒಟ್ಟು ಹುದ್ದೆಗಳು: 384

ಅರ್ಜಿ ಸಲ್ಲಿಸುವ ಬಗೆ : ಅನ್ ಲೈನ್

ಹುದ್ದೆಗಳ ವಿವರ

2018ರ ಬಾಕಿ ಉಳಿದ ಹುದ್ದೆಗಳು 

  • ಕೇಂದ್ರ ಸಚಿವಾಲಯ 200
  • ರೇಲ್ವೆ ಮಂಡಳಿ: 8
  • ಸಶಸ್ತ್ರ ಪಡೆ : 12
  • ಚುನಾವಣಾ ಆಯೋಗ 2
  • ವಿದೇಶಾಂಗ ಇಲಾಖೆ 2

2019ರ ಬಾಕಿ ಉಳಿದ ಹುದ್ದೆಗಳು

  • ಕೇಂದ್ರ ಸಚಿವಾಲಯ: 142
  • ರೇಲ್ವೆ ಮಂಡಳಿ: 9
  • ಸಶಸ್ತ್ರ ಪಡೆ: 7
  • ವಿದೇಶಾಂಗ ಇಲಾಖೆ: 2

ವಿದ್ಯಾರ್ಹತೆ

ಈ ಸೈನೋಗ್ರಾಫರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪಿಯುಸಿ (12th) ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಅಭ್ಯರ್ಥಿಗಳು ಕನಿಷ್ಟ 2 ರಿಂದ 6 ವರ್ಷಗಳ ಸೇವಾ ಅನುಭವವನ್ನು ಹೊಂದಿರಬೇಕು.

ವಯೋಮಿತಿ

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 50 ವರ್ಷಗಳ ವಯೋಮಿತಿಯನ್ನು ಮೀರಿರಬಾರದು
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು
  • ಎಸ್ಸಿ-ಎಸ್ಟಿ ಪುವರ್ಗ-1 ರ ಅಭ್ಯರ್ಥಿಗಳಿಗೆ 5 ವರ್ಷಗಳು 
  • ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ವಿಧಾನ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 25,2023

ನೋಟಿಫಿಕೇಷನ್ : ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!