Saturday, May 25, 2024

ಪ್ರಾಯೋಗಿಕ ಆವೃತ್ತಿ

ಆರಂಭವಾಯ್ತು ಶಾಲೆ. ಮಕ್ಕಳಿಗೆ ಸಂಭ್ರಮದ ಸ್ವಾಗತ

ಕೋವಿಡ್ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ಸರಿಯಾಗಿ ಶಾಲೆ ಪ್ರಾರಂಭವಾಗಲಿಲ್ಲ. ಎರಡು ವರ್ಷಗಳ ನಂತರ ಶಾಲೆಯ ಶೈಕ್ಷಣಿಕ ವರ್ಷ ಪ್ರಾರಂಭವಾದ ಇಂದು ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು.

ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಇಂದು ಸಂಭ್ರಮ-ಸಡಗರ ಎಲ್ಲವೂ ಕಂಡು ಬಂತು. 2022-23ನೇ ಶೈಕ್ಷಣಿಕ ವರ್ಷದ ಆರಂಭದ ದಿನವಾದ ಇಂದು ತಳಗವಾದಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ನೂರಾರು ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರು ತುಂಬಿದ್ದರು.

ಶಾಲೆಯ ಪ್ರಾರಂಭದ ದಿನವಾದ ಇಂದು ಕಲಾತಂಡಗಳಾದ ಪೂಜಾ ಕುಣಿತ, ನಂದಿಕೋಲು, ಪಟ ಕುಣಿತ, ಕೋಲಾಟದ ಮೂಲಕ ಮಕ್ಕಳಿಗೆ ಅಭೂತಪೂರ್ವ ಸ್ವಾಗತ ನೀಡಿ ಶಾಲೆಗೆ ಕರೆತರಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ನಗರಿ ಬಾರಿಸುವ ಮೂಲಕ ಶಾಲಾ ಮಕ್ಕಳಿಗೆ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಸ್ವಾಮಿ, 15 ದಿನ ಮುಂಚಿತವಾಗಿ ಶಾಲೆ ಪ್ರಾರಂಭವಾಗುತ್ತಿದೆ. 15 ದಿನಗಳ ಹಬ್ಬದ ರೀತಿ ಕಾರ್ಯಕ್ರಮ ರೂಪಿಸಲಾಗಿದೆ.

ಮಕ್ಕಳು ಶಾಲೆಯಲ್ಲಿ ಓದಬೇಕು. ಅಂತಹ ಹೃತ್ಪೂರ್ವಕ ಸ್ವಾಗತವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ನೀಡಲಾಗುತ್ತಿದೆ. ಎರಡು ವರ್ಷ ಇದ್ದರಿಂದ ಕಲಿಕೆಯಲ್ಲಿ ಮಕ್ಕಳು ಹಿಂದುಳಿದಿದ್ದರು. ಆದರೆ ಇಂದು ಆ ಸ್ಥಿತಿಯಿಂದ ಹೊರ ಬಂದು ಶಾಲೆಗಳು ಪ್ರಾರಂಭವಾಗಿದೆ.

ಉಡುಗೊರೆ, ಗ್ರಾಮಸ್ಥರು, ಶಿಕ್ಷಕರು ಎಲ್ಲರೂ ಸೇರಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂದು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ.ಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.

ಜಾನಪದ ತಂಡಗಳಾದ ಕೋಲಾಟ, ತಮಟೆ, ನಂದಿಕೋಲು, ಪೂಜಾಕುಣಿತ ತಂಡಗಳಿಂದ ಶಾಲೆಗೆ ಮಕ್ಕಳನ್ನು ಸ್ವಾಗತಿಸಿದ ದೃಶ್ಯ ರೋಮಾಂಚಕವಾಗಿತ್ತು. ಮಕ್ಕಳು ಸ್ವಾಗತಿಸಿದ ಪರಿ ಕಂಡು ಸಂಭ್ರಮಿಸಿದರು. ಹಲವೆಡೆ ಮಕ್ಕಳಿಗೆ ಸಿಹಿ ಹಂಚಿ ಶಾಲೆಗೆ ಬರಮಾಡಿಕೊಳ್ಳಲಾಯಿತು.

ಎಸ್.ಡಿ.ಎಮ್.ಸಿ ಅಧ್ಯಕ್ಷ ತಳಗವಾದಿ ಪ್ರಕಾಶ್, ಕ್ಷೇತ್ರ ಸಮನ್ವಯ ಅಧಿಕಾರಿ ಯೋಗೀಶ್ ಬಾಬು, ಇತರರಿದ್ದರು.

ಇದನ್ನು ಓದಿ: ರೈತರಿಗಾಗಿ ರೈತ ಉತ್ಪಾದಕ ಕಂಪನಿ ಆರಂಭ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!