Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನರ ಸ್ವಾಭಿಮಾನದ ಬದುಕಿಗಾಗಿ ಹೋರಾಟ ಮಾಡಿ: ಮಂಜುನಾಥ್‌

ಗ್ರಾಮೀಣ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ಕನ್ನಡ ಸೇನೆ ಸಂಘಟನೆ ಮೂಲಕ ಯುವಕರು ಹೋರಾಟ ಮಾಡಬೇಕೆಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಕರೆ ನೀಡಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಸೇನೆ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಹೋರಾ ಟದ ಮೂಲಕ ಮಂಡ್ಯ ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಹಾಕಬೇಕೆಂದು ಅದೇಶ ನೀಡಿದ್ದರೂ ಕೂಡ ಇಂದಿಗೂ ತಾಲೂಕು ಆಡಳಿತ ಅನುಷ್ಠಾನ ಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಉಳಿವಿಗಾಗಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಕೆಲಸಗಳು ಸಕಾಲದಲ್ಲಿ ಆಗಬೇಕು, ಸರೋಜಿನಿ ಮಹಷಿ ವರದಿ ಜಾರಿ ಮಾಡಿ ಶೇ. 70ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ತಕ್ಷಣ ಮಾಡಬೇಕು. ಮಳವಳ್ಳಿಯ ತಾಲೂಕಿನ ಪ್ರವಾಸಿ ತಾಣಗಳಿಗೆ ಮೂಲ ಸೌಲಭ್ಯವನ್ನು ನೀಡಬೇಕೆಂದು ಒತ್ತಾಯಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಎಚ್ಚರಿಸುವ ಕೆಲಸ ವಾಗಬೇಕಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಜಿ ಮಹಾಂತಪ್ಪ, ಕನ್ನಡ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷರ ಮಂಡಿ ಬೆಟ್ಟಳ್ಳಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಯಡಗನಹಳ್ಳಿ ಮಧು, ಜಿಲ್ಲಾ ಸಂಚಾಲಕ ರಮೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಶಿವು, ಚಂದ್ರು ಇದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಕನ್ನಡ ಸೇನೆ ತಾಲೂಕು ಅಧ್ಯಕ್ಷರಾಗಿ ಕಿರಣ್, ಉಪಾಧ್ಯಕ್ಷರಾಗಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಲಿಂಗರಾಜು, ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ಸು, ಸಂಚಾಲಕರಾಗಿ ರಾಜು, ಕಿರು ಗಾವಲು ಹೋಬಳಿ ಘಟಕ ಅಧ್ಯಕ್ಷರಾಗಿ ಹರೀಶ್, ಪದಾಧಿಕಾರಿಗಳಾಗಿ ಹರೀಶ್, ಸುನೀಲ್, ಹರ್ಷಕುಮಾರ್, ಅಭಿಷೇಕ್, ಅನಿಲ್‌ಕುಮಾರ್, ಯಶ್ವಂತ್, ಮಾದೇಶ್, ಮೋಹನ್, ಮಹೇಶ್, ರಾಜು, ಶಿವ ರಾಜ್, ಸುನೀಲ್, ಕಿರಣ್, ಚಂದನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಪದಾಧಿಕಾರಿ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!