Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತೀನಗರ : ಕಬ್ಬು ಕಟಾವು ಯಂತ್ರದ ಪ್ರಾತ್ಯಕ್ಷತೆ

ಮದ್ದೂರು ತಾಲ್ಲೂಕು ಭಾರತೀನಗರದ ತಿಪ್ಪೂರು ಗ್ರಾಮದಲ್ಲಿ ಕಬ್ಬು ಕಟಾವು ಯಂತ್ರದ ಪ್ರಾತ್ಯಕ್ಷತೆ ಕಾರ್ಯಕ್ರಮಕ್ಕೆ ಶ್ರೀಚಾಮುಂಡೇಶ್ವರಿ ಸಕ್ಕರೆ ಕಂಪನಿ ಕಬ್ಬು ಬೆಳೆ ಒಪ್ಪಿಗೆದಾರರ ಒಕ್ಕೂಟದ ಅಧ್ಯಕ್ಷ ಕೆ.ಎಲ್.ಶಿವರಾಮು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬೇಸಿಗೆ ಹಂಗಾಮಿನಲ್ಲಿ ಕಬ್ಬು ಕಟಾವು ಮಾಡುವ ಆಳುಗಳ ಕೊರತೆಯನ್ನು  ನೀಗಿಸಲು ಕಬ್ಬು ಕಟಾವು ಯಂತ್ರವನ್ನು ಬಳಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಶ್ರೀಚಾಮುಂಡೇಶ್ವರಿ ಸಕ್ಕರೆ ಕಂಪನಿ ರೈತರಿಗೆ ಅನುಕೂಲ ಮಾಡುವ ದೃಷ್ಠಿಯಿಂದ ಕಬ್ಬು ಕಟಾವು ಮಾಡುವ ಯಂತ್ರವನ್ನು ಪರಿಚಯಿಸುತ್ತಿದೆ. ಇದರಿಂದ ಆಳುಗಳ ಕೊರತೆಯನ್ನು ನೀಗಿಸಬಹುದು ಎಂದರು.

ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂದಿನ ದಿನಗಳಲ್ಲಿ ನಾಲ್ಕೂವರೆ ಅಡಿಯಲ್ಲಿ ಕಬ್ಬು ನಾಟಿ ಮಾಡುವ ರೈತರಿಗೆ ಉಚಿತವಾಗಿ ಬಿತ್ತನೆ ಕಬ್ಬು, ಕಳೆನಾಶಕ, ಕೀಟನಾಶಕ, ಔಷಧಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಕಾರ್ಖಾನೆಯ ಕಬ್ಬು ವ್ಯವಸ್ಥಾಪಕ ಶಿವಪ್ಪ, ಒಕ್ಕೂಟದ ಮಠದದೊಡ್ಡಿ ಮರಿಸ್ವಾಮಿ, ಶೆಟ್ಟಹಳ್ಳಿ ಶಿವರಾಮು, ಎಸ್.ಬಿ.ಸಿದ್ದರಾಮು, ಚಿಕ್ಕಹನುಮೇಗೌಡ, ಶಿವಲಿಂಗೇಗೌಡ (ತೈಲಪ್ಪ), ಕುಮಾರ್, ಸತೀಶ್, ಕೃಷ್ಣ, ಕರೀಗೌಡ, ಕಾರ್ಖಾನೆ ಅಧಿಕಾರಿಗಳಾದ ನಾಗರಾಜು ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!