Thursday, September 19, 2024

ಪ್ರಾಯೋಗಿಕ ಆವೃತ್ತಿ

”ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ”- ಸುಮಲತಾ ಅಂಬರೀಶ್

ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ, ರಾಜಕಾರಣ ಬಿಟ್ರು ಸ್ವಾಭಿಮಾನ, ಸಿದ್ದಾಂತ ಬಿಡಲ್ಲ.
ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀರಾ ಎಂದು ಕೇಳಿದಾಗ, ಜೆಡಿಎಸ್‌ ಬಿಜೆಪಿ ಮೈತ್ರಿ ಆಗಿದೆ, ಆದರೆ ಕ್ಷೇತ್ರ ಹಂಚಿಕೆ ಇನ್ನು ಆಗಿಲ್ಲ.
ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ದುಡುಕಿನ ನಿರ್ಧಾರ ಮಾಡಲ್ಲ. ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನೂರಾರು ನಡೆದಿರಬಹುದು. ಆದರೆ ಇನ್ನು ಯಾವುದೇ ಕ್ಷೇತ್ರ ಹಂಚಿಕೆ ಕನ್ಫರ್ನ್ ಆಗಿಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ, ನನಗೆ ಆ ಕಾನ್ಫಿಡೆನ್ಸ್ ಇದೆ ಎಂದರು.

ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ಕೇಳಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ. ಬೆಂಗಳೂರು ಉತ್ತರ ಕ್ಷೇತ್ರದ ಆಫರ್ ಕಳೆದ ಚುನಾವಣೆಯಲ್ಲೇ ನಿರಾಕರಿಸಿದ್ದೆ.  ನನಗೆ ಈ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಬೇರೆ ಕ್ಷೇತ್ರದ ಆಫರ್ ಎಂದಿಗೂ ಒಪ್ಪಲ್ಲ. ಇದನ್ನ ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದು ಕೊಡಬೇಕಾ? ಮಂಡ್ಯ ಜಿಲ್ಲೆ ರಾಜಕಾರಣ ಯಾವಾಗಲೂ ಚಾಲೆಂಜಿಂಗ್.
ಚಾಲೆಂಜ್‌ಗೆ ಹೆದರುವ ಸ್ವಭಾವ ನನ್ನದ್ದಲ್ಲ ಎಂದು ಪ್ರತಿಕ್ರಿಯಿಸಿದರು.

ಸಿಎಂ ಬದಲಾವಣೆ ಅವರ ಆಂತರಿಕ ವಿಚಾರ

ಸಿಎಂ ಬದಲಾವಣೆ ಅವರ ಆಂತರಿಕ ವಿಚಾರ, ಅವರವರ ಪಕ್ಷದ ಆಂತರಿಕ ವಿಚಾರ, ನಾನು ಕಮೆಂಟ್ ಮಾಡಲ್ಲ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಹಾಗೂ ನೀರಿನ ಸಮಸ್ಯೆ ಇದೆ. ಅನುದಾನ ಸಿಗದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಫ್ರೀ ಗ್ಯಾರಂಟಿ ಕೊಟ್ಟರೆ ಅಭಿವೃದ್ಧಿ ಕೆಲಸ ಆಗಲ್ಲ ಎಂದು ಮೊದಲೇ ಹೇಳಿದ್ವಿ. ಚುನಾವಣೆ ಗೆಲ್ಲುವ ಉದ್ದೇಶದಿಂದ ಬರೀ ಫ್ರೀ ಫ್ರೀ ಎಂದು ಕೊಟ್ಟರೆ ತೊಂದರೆ ಆಗುತ್ತದೆ.
ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಎಲ್ಲಿಂದ ತರ್ತೀರಾ? ಫಂಡ್ಸ್ ಹುಟ್ಸೋಕೆ ಆಗಲ್ಲ, ಇರೋದರಲ್ಲೇ ಮಾಡಬೇಕು.
ನೀವು ಫೀ ಕೊಡ್ತಿರುವ ಜನರಿಗೆ ತೊಂದರೆ ಆಗುತ್ತದೆ. ಈಗ ಜನರಿಗೂ ಇದು ಗೊತ್ತಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಕೂಡ ಗ್ಯಾರಂಟಿ‌ಗಳ ಚಾಲೆಂಜ್ ಫೇಸ್ ಮಾಡ್ತಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!