Monday, May 20, 2024

ಪ್ರಾಯೋಗಿಕ ಆವೃತ್ತಿ

ಅ.12ಕ್ಕೆ ಡಾ.ಹೆಚ್.ಡಿ.ಚೌಡಯ್ಯ ಪ್ರತಿಮೆ ಅನಾವರಣ

ಡಾ.ಹೆಚ್.ಡಿ.ಚೌಡಯ್ಯ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ಹೆಚ್.ಡಿ.ಚೌಡಯ್ಯನವರ ಹುಟ್ಟೂರು ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಅ.12ರಂದು ಬೆಳಿಗ್ಗೆ 10 ಗಂಟೆಗೆ ಡಾ.ಹೆಚ್.ಡಿ.ಚೌಡಯ್ಯ ಪತ್ರಿಮೆ ಅನಾವರಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೆಚ್.ಎಲ್.ಶಿವಣ್ಣ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ ದಿವ್ಯಸಾನಿಧ್ಯವಹಿಸಿ, ಪ್ರತಿಮೆ ಅನಾವರಣ ಮಾಡುವರು. ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ  ಕೆ.ಗೋಪಾಲಯ್ಯ ಸಮಾರಂಭ ಉದ್ಘಾಟಿಸುವರು. ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಹೆಚ್.ಡಿ.ಚೌಡಯ್ಯ ಅವರನ್ನು ಕುರಿತು ಮಾತನಾಡುವರು ಎಂದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಡಾ.ಹೆಚ್‌.ಎಸ್.ಮುದ್ದೇಗೌಡ ರಚಿಸಿರುವ ಡಾ.ಹೆಚ್.ಡಿ.ಚೌಡಯ್ಯ ಕಾಯಕಯೋಗಿ ಮಸ್ತಕ ಬಿಡುಗಡೆ ಮಾಡುವರು. ಸಂಸದೆ ಸುಮಲತಾ ಅಂಬರೀಶ್ ಪ್ರಶಸ್ತಿ ಪ್ರಧಾನ ಮಾಡುವರು. ಇದೆ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರಿಗ  ಸಾಹಿತ್ಯ ಹಾಗೂ ಸಮಾಜಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ  ಕೆ.ಎಸ್.ವಿಜಯ್‌ ಆನಂದ್, ಮೂಳೆ ಮತ್ತು ಕೀಲು ಶಸ್ತ್ರ ಚಿಕಿತ್ಸಕ ಡಾ.ಹೆಚ್.ಎಸ್.ರವಿಕುಮಾರ್, ತಹಶೀಲ್ದಾರ್ ಡಾ.ಸ್ಮಿತಾ ರಾಮು ಅವರನ್ನು ಸನ್ಮಾನಿಸಲಾಗುವುದು. ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅವರು ಕು.ವಿಸ್ಮಯ ಹೆಚ್.ಕೆ, ಕು.ದಿಶಾ.ಎಸ್., ಸತ್ಯಮೂರ್ತಿ.ಹೆಚ್.ಕೆ, ಚಿ ಭುವನ ರವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ,  ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ, ಸಮಾಜ ಸೇವಕ ಡಾ.ಎನ್.ಎಸ್.ಇಂದ್ರೇಶ, ಹೊಳಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೆಚ್.ಡಿ.ರವಿ, ಹೊಳಲು ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ಹೆಚ್.ಎಂ.ಕುಮಾರ್,  ಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪದ್ಮನಾಗರಾಜು ಅವರು ಭಾಗವಹಿಸುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಡಾ.ರಾಮಲಿಂಗಯ್ಯ ಲಿಂಗಪ್ಪ, ಶ್ರೀಧರ್, ಲಿಂಗರಾಜು ಬೋರೇಗೌಡ ಹಾಗೂ ಶಿವಣ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!