Friday, September 20, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಆರಂಭಿಸಲು ವಿಳಂಬ ; ರೈತ ನಾಯಕಿ ಸುನಂದ ಜಯರಾಂ ಆಕ್ರೋಶ

ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯದೆ ವಿಳಂಬನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿಳಂಬಧೋರಣೆಯನ್ನು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ರೈತಪರ ಹೋರಾಟಗಾರರಾದ ಸುನಂದಾ ಜಯರಾಂ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ನಗರದಲ್ಲಿರುವ ರೈತರ ಆರ್ಥಿಕ ಜೀವನಾಡಿ ಮಷುಗರ್ ಕಾರ್ಖಾನೆ ಕಬ್ಬು ಅರೆಯಲಿಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಕಳೆದ ಜೂನ್ ತಿಂಗಳ ಮೊದಲ ವಾರದಲೇ ಆರಂಭಗೊಳ್ಳಬೇಕಿತ್ತು, ಮೈಷುಗರ್ ವ್ಯಾಪ್ತಿಯಲ್ಲಿ ಈಗಾಲೇ 5 ಲಕ್ಷ ಟನ್ ಕಬ್ಬು ಒಪ್ಪಿಗೆಯಾಗಿದೆ, ಕಬ್ಬು ಅರೆಯಲು ಕಾರ್ಖಾನೆ ಸಿದ್ದವಿದೆ, ಎಲ್ಲಾ ಯಂತ್ರಗಳ ಸಿದ್ದತೆಯಾಗಿದೆ, ಅದರೂ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.

ಯಶಸ್ಸಿಯಾಗಿ ಕಬ್ಬನ್ನು ನುರಿಸಲಿಕ್ಕೆ ಕಾರ್ಖಾನೆ ತಯಾರಾಗಿರುವ ಸಂದರ್ಭದಲ್ಲಿ ಸರ್ಕಾರ 50 ಕೋಟಿ ರೂ.ಗಳನ್ನು ಕೊಟ್ಟಿದೆ, ಹಣವಿದೆ, ಕಬ್ಬಿದೆ, ಕಾರ್ಖಾನೆ ಸಿದ್ದಗೊಂಡಿದ್ದರೂ ಒಂದು ತಿಂಗಳು ಕಬ್ಬನ್ನು ನುರಿಸಲಿಕ್ಕೆ ವಿಳಂಬವಾಗಿದೆ, ಈ ಧೋರಣೆಯನ್ನು ಖಂಡಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಪ್ರಗತಿಪರ ಹೋರಾಟಗಾರರು ಮತ್ತು ರೈತಸಂಘಟನೆಗಳು ಬಹುತೇಕ ಕಳೆದ 2 ವರ್ಷಗಳಿಂದ ಮೈಷುಗರ್ ಆರಂಭಕ್ಕೆ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇವೆ, ಅದರ ಪ್ರಯತ್ನ ಫಲಿಸುವ ಸನ್ನಿವೇಶದಲ್ಲಿ ಸರ್ಕಾರ ಸ್ಪಂದಿಸಿದೆ. ಈ ಸಂದರ್ಭದಲ್ಲಿ ಕಾರ್ಖಾನೆಯೊಳಗೆ ತಾಂತ್ರಿಕ ಜ್ಞಾನ ಉಳ್ಳ ಎಂ.ಡಿ ಅವರನ್ನು ಬದಲಾವಣೆ ಮಾಡಿ ಐಎಎಸ್ ಅಧಿಕಾರಿ ರವಿಕುಮಾರ್ ಅವರನ್ನು ಸರ್ಕಾರ ನೇಮಿಸಿದೆ, ಕಳೆದ ಒಂದು ವಾರದಿಂದ ಯಾವುದೇ ಅಧಿಕಾರಿಗಳು ಕಾರ್ಖಾನೆಯತ್ತ ಸುಳಿದಿಲ್ಲ, ಆಡಳಿತಾಧಿಕಾರಿನೂ ಇಲ್ಲ, ತಾಂತ್ರಿಕ ಜ್ಞಾನ ಉಳ್ಳವರೂ ಇಲ್ಲ, ಈಗ ನೂತವಾಗಿ ನೇಮಕಗೊಂಡಿರುವ ಎಂ.ಡಿ.ಅವರೂ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

ಇಂತಹ ಸಂದರ್ಭದಲ್ಲಿ ರೈತರದ್ದೇನು ತಪ್ಪಿದೆ, ಮತ್ತೇ ಕಬ್ಬು ಬೇರೆ ಬೇರೆ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಆಗುತ್ತಿದೆ, 2-3 ಖಾಸಗಿ ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿಯ ಕಬ್ಬನ್ನು ತೆಗೆದುಕೊಳ್ಳುತ್ತಿವೆ, ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ, ಮೈಷುಗರ್ ವ್ಯಾಪ್ತಿಯ ಕಬ್ಬು ಬೇರೆ ಕಾರ್ಖಾನೆಗೆ ಹೋಗಬಾರದು, ನಮ್ಮ ಕಾರ್ಖಾನೆಯೇ ಕಬ್ಬನ್ನು ಅರೆಯಬೇಕು ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ಸರ್ಕಾರ ಈ ಕೂಡಲೇ ಇದಕ್ಕೆ ಗಮನ ಕೊಟ್ಟು, ಹಣಕೊಟ್ಟಿದ್ದರ ಜೊತೆಗೆ ಸಕಾಲದಲ್ಲಿ ಕಾರ್ಖಾನೆಯಲ್ಲಿಯೇ ಕಬ್ಬು ಅರೆಯಲಿಕ್ಕೆ ಅವಕಾಶ ಮಾಡಿಕೊಡಬೇಕು, ಹಾಲಿ ದಾಸ್ತಾನಿನಲ್ಲಿರುವಂತಹ ಸಕ್ಕೆರೆ ಯಾಕೆ ಮಾರಾಟವಾಗಿಲ್ಲ, ಕಳೆದ 2 ವಾರದ ಹಿಂದೆನೇ ಸಕ್ಕರೆ ಮಾರಾಟವಾಗುತ್ತಿದೆ ಎಂದು ಹಿಂದೆ ಇದ್ದಂತಹ ಎಂ.ಡಿ.ಅವರು ಹೇಳಿದ್ದರು, ಆ ಮಾರಾಟ ಯಾಕೆ ನಿಲ್ತು, ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.

ಈಗ ಕಬ್ಬನ್ನು ಕಡಿಯಲಿಕ್ಕೆ ಗ್ಯಾಂಗ್‌ಮನ್‌ಗಳು ಬಂದಿದ್ದಾರೆ, ಈಗಾಗಲೇ ಮಾತು ಕತೆಯಾಗಿತ್ತು, ಒಪ್ಪಂದವಾಗಿತ್ತು, ಅವರಿಗಾದರೂ ಮುಂಗಡ ಹಣ ಕೊಡಬಹುದಿತ್ತು, 50 ಕೋಟಿ ರೂ,ಗಳಲ್ಲಿ ಒಂದು ರೂ.ಗಳನ್ನೂ ಖರ್ಚು ಮಾಡಿಲ್ಲ ಅಂತ ಹೇಳ್ತಾರೆ, ಗ್ಯಾಂಗ್‌ಮನ್‌ಗಳಿಗೆ ಮುಂಗಡ ಹಣಕೊಟ್ಟಿಲ್ಲ ಅಂತ ಹೇಳ್ತಾರೆ, ಹೀಗಿರುವಾಗ ಜುಲೈ ಮೊದಲ ವಾರದಲ್ಲಿ ಕಬ್ಬು ಅರೆಯಲಿಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು.

ಯಾರದೂ ತಪ್ಪಿಲ್ಲ ತಪ್ಪಿಲ್ಲ ಅನ್ನೊದಾದರೆ ಮೈಷುಗರ್ ನಲ್ಲಿ ಕಬ್ಬು ಅರೆಯುವಿಗೆ ಏಕೆ ಪ್ರಾರಂಭಿಸಿಲ್ಲ, ಎಲ್ಲವೂ ಸಮರ್ಪಕವಾಗಿದ್ದರೂ ಯಾಕೆ ಸಾಧ್ಯವಾಗಿಲ್ಲ, ಇದು ಯಾರ ಹೊಣೆ ? ಜಿಲ್ಲಾ ರೈತ ಹಿರಕ್ಷಣಾ ಸಮಿತಿಯಿಂದ ಹಾಗೂ ಎಲ್ಲಾ ಜನಪರ ಹೋರಾಟ ಸಂಘಟನೆಗಳ ವತಿಯಿಂದ ನಾವು ಹೇಳುವುದೇನೇಂದರೆ ಈ ಕೂಡಲೇ ಕಾರ್ಖಾನೆಗೆ ಆಡಳಿತಾಧಿಕಾರಿ ಬರಬೇಕು, ತಾಂತ್ರಿಕ ಜ್ಞಾನ ಉಳ್ಳವರು ಇರಬೇಕು, ನೇಮಕವಾಗಿರುವ ಐಎಎಸ್ ಅಧಿಕಾರಿ ಇರಬೇಕು, ಎಲ್ಲಾ ಅಧಿಕಾರಿಗಳು 24 ಗಂಟೆಗಳ ಕಾಲ ಕಾರ್ಖಾನೆಯಲ್ಲಿರಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್, ಕನ್ನಡಸೇನೆ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮಂಡಿ ಬೆಟ್ಟಹಳ್ಳಿ ಮಂಜುನಾಥ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!