Thursday, September 19, 2024

ಪ್ರಾಯೋಗಿಕ ಆವೃತ್ತಿ

ಸನ್ನಿಲಿಯೋನ್ ಬರ್ತಡೇ ಅಂಗವಾಗಿ ರಕ್ತದಾನ

ಬಾಲಿವುಡ್ ನಟಿ ಸನ್ನಿಲಿಯೋನ್ ಗೂ ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿಗೂ ಎಲ್ಲಿಯ ಸಂಬಂಧ..!ಆದರೂ ಮಂಡ್ಯದಲ್ಲಿ ಸನ್ನಿಲಿಯೋನ್ ಅವರಿಗೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.ಸನ್ನಿಲಿಯೋನ್ ಅವರ ಸಾಮಾಜಿಕ ಸೇವೆಗೆ ಇಲ್ಲಿನ ಯುವಕರು ಫಿದಾ ಆಗಿ ಅಭಿಮಾನಿಗಳಾಗಿದ್ದಾರೆ.

ಶುಕ್ರವಾರ ಸನ್ನಿಲಿಯೋನ್ ಹುಟ್ಟು ಹಬ್ಬದ ಅಂಗವಾಗಿ ಮಂಡ್ಯದ ಕೊಮ್ಮೇರಹಳ್ಳಿಯ ಕೆಲವು ಯುವಕರು ಕೇಕ್ ಕಟ್ ಮಾಡಿ, ರಕ್ತದಾನ ಶಿಬಿರ,ಅನ್ನಸಂತರ್ಪಣೆ ಮಾಡಿ ಅಭಿಮಾನ ಮೆರೆದಿದ್ದಾರೆ.

ಕೊಮ್ಮೇರಹಳ್ಳಿ ಗ್ರಾಮದ ಮುಖ್ಯದ್ವಾರದ ಬಳಿ ಸನ್ನಿ ಲಿಯೋನ್ ಅವರ 20 ಅಡಿ ಎತ್ತರದ ಫ್ಲೆಕ್ಸ್ ನಿಲ್ಲಿಸಿ ಹೂವಿನ ಹಾರವನ್ನು ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹಲವು ಯುವಕರು ರಕ್ತದಾನ ಮಾಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಯುವಕರು, ಮಕ್ಕಳು, ಸನ್ನಿ ಲಿಯೋನ್ ಹುಟ್ಟುಹಬ್ಬದ ಶುಭಾಶಯ ಕೋರಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಸನ್ನಿ ಲಿಯೋನ್ ರವರ ಸಾಮಾಜಿಕ ಸೇವೆ ಬಹಳ ಶ್ಲಾಘನೀಯ. ಸಾಕಷ್ಟು ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಅವರ ಬೆನ್ನೆಲುಬಾಗಿದ್ದಾರೆ. ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡುತ್ತಿರುವುದು ಅವರನ್ನು ಅನಾಥ ಮಕ್ಕಳ ತಾಯಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ ಎಂದರು.

ಹಲವು ಸಾಮಾಜಿಕ ಕಾರ್ಯಗಳಿಗೆ ಆರ್ಥಿಕವಾಗಿ ಆಸರೆಯಾಗಿರುವ ಅವರ ಈ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಸನ್ನಿ ಲಿಯೋನ್ ಅವರ ವೃತ್ತಿ ಬೇರೆ ಆದರೆ ಅವರ ವ್ಯಕ್ತಿತ್ವ ಬಹಳ ದೊಡ್ಡದು. ಅವರ ಸಮಾಜ ಸೇವೆ ಮತ್ತಷ್ಟು ಮುಂದುವರಿಯಲಿ ಎಂದು ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಕೊಮ್ಮೇರಹಳ್ಳಿ ಗ್ರಾಮದ ನವೀನ್ ಮಾತನಾಡಿ,ಸನ್ನಿಲಿಯೋನ್ ಅವರ ಜನಪರ ಸೇವೆ ಗುರುತಿಸಿ ಅವರ ಜನ್ಮದಿನ ಆಚರಣೆ ಮಾಡಿದ್ದೇವೆ.ಕಳೆದ ವರ್ಷ ಕೋವಿಡ್ ಹಿನ್ನಲೆಯಲ್ಲಿ ಹುಟ್ಟು ಹಬ್ಬ ಸರಳವಾಗಿ ಆಚರಿಸಿದ್ದೆವು.ಈ ಬಾರಿ ರಕ್ತದಾನ ಶಿಬಿರ,ಅನ್ನ ಸಂತರ್ಪಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸಾತನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮನು,ಸಂಜಯ್,ಅಭಿ,ಶ್ರೀನಿವಾಸ್,ದರ್ಶನ್,ಹೇಮಂತ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!