Friday, November 20, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಸ್ಟಾರ್ ಚಂದ್ರು

ನನಗೆ ಹಣದ ಹಂಬಲವಿಲ್ಲ, ನಿಮ್ಮೆಲ್ಲರ ಸೇವೆ ಮಾಡುವ ಹಂಬಲದಿಂದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬಂದಿದ್ದೇನೆ. ನನಗೆ ಈ ಬಾರಿ ನಿಮ್ಮ ಅಮೂಲ್ಯವಾದ ಮತ ನೀಡಿದರೆ ಅದಕ್ಕೆ ಋಣಿಯಾಗಿ ನಿಮ್ಮೆಲ್ಲರ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ ( ಸ್ಟಾರ್ ಚಂದ್ರು ) ತಿಳಿಸಿದರು.

ಕೆ.ಆರ್.ಪೇಟೆ ತಾಲೂಕಿನ ಐಚನಹಳ್ಳಿ, ಬೂಕನಕೆರೆ, ಬಲ್ಲೇನಹಳ್ಳಿ,ಗಂಜಿಗರೆ, ಮಡುವಿನಕೋಡಿ, ಹರಿಹರಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.ನಾನು ಬಡ ಕುಟುಂಬದಲ್ಲಿ ಜನಿಸಿದರು ನಿರಂತರ ಪರಿಶ್ರಮದಿಂದ ಇಂದು ಯಶಸ್ವಿ ಉದ್ಯಮಿಯಾಗಿದ್ದೇನೆ. ನನಗೆ ಹಣದ ಅವಶ್ಯಕತೆ ಇಲ್ಲ ನಿಮ್ಮೆಲ್ಲರ ಸೇವೆ ಹಾಗೂ ನನ್ನ ಸ್ವಾಭಿಮಾನಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲೇಬೇಕು ಎಂಬ ಹಂಬಲದಿಂದ ಬಂದಿದ್ದೇನೆ. ನನ್ನನ್ನು ನಂಬಿ ಈ ಬಾರಿ ನಿಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ನನ್ನನ್ನು ಬೆಂಬಲಿಸಿದರೆ ಅದರ ಋಣಿಯಾಗಿ ಪ್ರಾಮಾಣಿಕವಾಗಿ ಹಗಲು ಇರುಳು ಶ್ರಮಿಸುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದರು.

ಜಿಲ್ಲೆಯ ಮಣ್ಣಿನ ಮಗ

ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ ರಾಮಗೌಡ ಮಾತನಾಡಿ ನಮ್ಮ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಜಿಲ್ಲೆಯ ಮಣ್ಣಿನ ಮಗ. ನನ್ನ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕೆಂಬ ಬಯಕೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ .‌ ನೂರಕ್ಕೆ ನೂರರಷ್ಟು ಜಿಲ್ಲೆಯ ಸ್ವಾಭಿಮಾನ ಜನ ಕೈ ಹಿಡಿಯಲಿದ್ದಾರೆ ಹಾಗೂ .ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ನಮ್ಮ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ. ಇದರ ಜೊತೆಗೆ ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಹೊರಡಿಸಿರುವ 25 ಭರವಸೆಗಳನ್ನು ಒಳಗೊಂಡ ನ್ಯಾಯಪತ್ರಕ್ಕೆ ಜನಮನ್ನಣೆ ಸಿಗಲಿದ್ದು ಜನ  ‘ಕೈ’ ಹಿಡಿಯಲಿದ್ದಾರೆ.ಜಿಲ್ಲೆಯ ಸಮಸ್ಯೆ, ಸವಾಲುಗಳ ಬಗ್ಗೆ ಅರಿವಿದೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕನಸು ಕಟ್ಟಿಕೊಂಡಿದ್ದರೆ ಅವರ ಗೆಲುವು ಈ ಜಿಲ್ಲೆಯ ಜನರ ಗೆಲುವು. ರೈತರ ಗೆಲುವು ಎಂದು ಹೇಳಿದರು.

ಸರ್ಕಾರದ ಕೈ ಬಲಪಡಿಸಬೇಕು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಸರಳ ಸಜ್ಜನಿಕೆ ಹೊಂದಿರುವ ಹಾಗೂ ಸಮಾಜಮುಖಿ ಚಿಂತನೆಗಳನ್ನು ಹೊಂದಿರುವ ನಮ್ಮ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ ಸ್ಟಾರ್ ಚಂದ್ರು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಸರ್ಕಾರದ ಕೈ ಬಲಪಡಿಸಬೇಕು ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೇಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಗ್ರಾಮೀಣ ಪ್ರದೇಶದ ಮಹಿಳೆಯರು ಆರತಿ ಎತ್ತಿ ಹಣೆಗೆ ತಿಲಕವನ್ನಿಟ್ಟು ಹೃದಯಸ್ಪರ್ಶಿಸುವಂತೆ ವಿವಿಧ ಜಾನಪದ ಕಲಾ ವಾದ್ಯಗಳೊಂದಿಗೆ ಮೂಲಕ ಸ್ವಾಗತಿಸಿ ತಮ್ಮ ಗ್ರಾಮಗಳಿಗೆ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್,ಬಿ. ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್,ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ. ಬಿ ಮಹೇಶ್, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ಬೂಕನಕೆರೆ ವೆಂಕಟೇಶ, ಮುಖಂಡರಾದ ಮಡುವಿನಕೋಡಿ ಕಾಂತರಾಜು, ಅಗ್ರಹಾರಬಾಚಳ್ಳಿ ಕುಮಾರ್, ವಿಠಲಾಪುರ ಸುಬ್ಬೇಗೌಡ, ಕಾಂಗ್ರೆಸ್ ತಾಲೂಕು ಉಸ್ತುವಾರಿ ಸಿ.ಆರ್. ರಮೇಶ್, ಕೆಯುಐಡಿಎಫ್‌ಸಿ ಮಾಜಿ ಅಧ್ಯಕ್ಷ ಮತ್ತಿಘಟ್ಟಕೃಷ್ಣಮೂರ್ತಿ, ಕಾಂಗ್ರೆಸ್ ಯುವ ಮುಖಂಡ ಡಾ:ಕೆ. ಸಿ ಶ್ರೀಕಾಂತ್, ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಅಯಾಜ್ ಷರೀಫ್, ಯುವ ಮುಖಂಡರಾದ ಬೀರುವಳ್ಳಿ ಆಕಾಶ್ ಗೌಡ, ಕೊಮ್ಮೇನಹಳ್ಳಿ ಅನಿಲ್, ಸುನಿಲ್, ಹೊಸಹೊಳಲು ಬಸವರಾಜು, ನೂರಾರು ಕಾಂಗ್ರೆಸ್ ಮುಖಂಡರು ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ