ಮಂಡ್ಯದ ಕಿರಗಂದೂರು ಗ್ರಾಮದ ಮಾದರಿ ರೈತ ಕೆ ಪಿ ಸಿದ್ದರಾಜು ಅವರ ತೋಟದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದಿಂದ ‘ಶ್ರೀಗಂಧ ಬೆಳೆಗಾರರ ಸಮಾವೇಶ ಹಾಗೂ ಸಂವಾದ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ 80 ಕ್ಕೂ ಹೆಚ್ಚಿನ ಶ್ರೀಗಂಧ ಬೆಳೆಗಾರರು ಹಾಗೂ ಆಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಸಿರು ಬೆಳೆಸಿ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡುವ ಹಾಗೂ ರೈತರಿಗೆ ಅವರ ಪರಿಸರ ಕಾಳಜಿಗೆ ಆರ್ಥಿಕ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾದ “ಕಾರ್ಬನ್ ಕ್ರೆಡಿಟ್ ಯೋಜನೆ” ಯ ಬಗ್ಗೆ ಇದರಿಂದ ರೈತರಿಗೆ ಸಿಗುವ ಲಾಭಗಳ ಬಗ್ಗೆ ಮಾಹಿತಿ ನೀಡಲಾಯಿತು.
ಆರಿಗ್ರಾಫ್ ಸಂಸ್ಥೆಯ ಸುಬ್ಬು ಜೋಯಿಸ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಕಾರ್ಬನ್ ಕ್ರೆಡಿಟ್ ಯೋಜನೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ ಅಮರನಾರಾಯಣ ಭಾ. ಆ. ಸೇ. ( ನಿವೃತ್ತ), ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯು ಶರಣಪ್ಪ, ಜಿಲ್ಲಾಧ್ಯಕ್ಷ ಹಂದಿ ನಾಗಣ್ಣ, ಕಾರ್ಯದರ್ಶಿ ಶ್ರೀಪಾದ ಆಚಾರ್ಯ, ಮದ್ದೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಎಂ ಕೆ ದೇವರಾಜ್ ಹಾಜರಿದ್ದರು.




