Thursday, September 19, 2024

ಪ್ರಾಯೋಗಿಕ ಆವೃತ್ತಿ

64ನೇ ದಿನಕ್ಕೆ ಕಾವೇರಿ ಹೋರಾಟ: ಹಲವು ಸಂಘಟನೆಗಳ ಬೆಂಬಲ

ಕಾವೇರಿ ವಿಚಾರದಲ್ಲಿ ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವಂತೆ ಆಗ್ರಹಿಸಿ ಮಂಡ್ಯನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ ನಿರಂತರ ಧರಣಿಯು 64ನೇ ದಿನಕ್ಕೆ ಕಾಲಿಟ್ಟಿದೆ.

ಮಂಗಳವಾರ ಜಿಲ್ಲಾ ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ, ಸ್ವಾಭಿಮಾನಿ ಒಕ್ಕಲಿಗರ ವೇದಿಕೆ ಹಾಗೂ ಮಹಿಳಾ ಒಕ್ಕೂಟದ ಕಾರ್ಯಕರ್ತರು ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.

ಮಂಡ್ಯನಗರದಲ್ಲಿ ರಸ್ತೆತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಸಂಕಷ್ಟದ ಸಮಯದಲ್ಲಿ ಮಧ್ಯ ಪ್ರವೇಶ ಮಾಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ.ಬೋರಯ್ಯ, ಜಿ.ಬಿ ಶಿವಕುಮಾರ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕೃಷ್ಣಪ್ರಕಾಶ್, ಮುದ್ದೇಗೌಡ, ನಾರಾಯಣ್, ಚಂದ್ರು, ಕನ್ನಡ ಸೇನೆ ಮಂಜುನಾಥ್ ಇತರರಿದ್ದರು.

ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ ಕಾರಸವಾಡಿ ಮಹದೇವ್, ಶಿವರಾಮೇಗೌಡ, ಮಹದೇವಯ್ಯ, ಮಹೇಂದ್ರ ಗೆಜ್ಜಲಗೆರೆ, ಸಿದ್ದೇಗೌಡ ಬಸರಾಳು, ಹನುಮಂತೇಗೌಡ ನೇರಳಕೆರೆ, ಸ್ವಾಭಿಮಾನಿ ಒಕ್ಕಲಿಗರ ವೇದಿಕೆಯ ಕೆ ಸಿ ರವೀಂದ್ರ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷೆ ಸುಜಾತ ಕೃಷ್ಣ, ಎಲ್ ಕೃಷ್ಣ, ಕೃಷ್ಣಪ್ಪ, ಧನಂಜಯ್, ಮಹಿಳಾ ಒಕ್ಕೂಟದ ಸುಶೀಲಮ್ಮ, ಕೋಮಲ, ಗಾಯತ್ರಿ, ಜ್ಯೋತಿ ನಾಗಣ್ಣ, ಪ್ರೇಮಾ, ನೀನಾ ಪಟೇಲ್ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!