Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟಕ್ಕೆ ಲಾಳನಕೆರೆ- ಮೊತ್ತಹಳ್ಳಿ ಗ್ರಾಮಸ್ಥರ ಬೆಂಬಲ

ಕಾವೇರಿ ವಿಚಾರದಲ್ಲಿ ರಾಜ್ಯ ರೈತರ ಹಿತ ಕಾಪಾಡುವಂತೆ ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮಂಡ್ಯದಲ್ಲಿ ನಡೆಸುತ್ತಿರುವ ಕಾವೇರಿ ಹೋರಾಟ 65ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಮಂಡ್ಯ ತಾಲ್ಲೂಕಿನ ಲಾಳನಕೆರೆ-ಮೊತ್ತಹಳ್ಳಿ ಗ್ರಾಮಸ್ಥರು ಸೇರಿದಂತೆ ಕಲಾವಿದರು ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸಿದ್ದರು.

ಮೊತ್ತಹಳ್ಳಿ – ಲಾಳನಕೆರೆ ಗ್ರಾಮಸ್ಥರು ಕಾವೇರಿ ಹೋರಾಟದಲ್ಲಿ ಭಾಗಿಯಾಗಿ ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶವನ್ನು ದಿಕ್ಕರಿಸಬೇಕು, ಕಾವೇರಿ ಕಣಿವೆ ಜಲಾಶಯಗಳಿಂದ ನೆರೆರಾಜ್ಯಕ್ಕೆ ನೀರು ಹರಿಸಬಾರದು,ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಸೌಹಾರ್ದಯುತ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಸಹಾಯಕ ಇಂಜಿನಿಯರ್ ಕೆಂಪೇಗೌಡ ಮಾತನಾಡಿ, ಕಾವೇರಿ ಚಳವಳಿ ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಹೇಳಲೇ ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮುಖ್ಯಮಂತ್ರಿಗಳನ್ನ ತರಾತುರಿಯಲ್ಲಿ ಕರೆದುಕೊಂಡು ಹೋದರು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಕಾಂಗ್ರೆಸ್ ಹೈಕಮಾಂಡ್ ಓಲೈಕೆಗಾಗಿ ನೆರೆರಾಜ್ಯಕ್ಕೆ ನೀರು ಹರಿಸುತ್ತಿದ್ದಾರೆ ದೂರಿದರು.

ಗ್ರಾ.ಪಂ.ಸದಸ್ಯ ಎಂ ಡಿ ಸತೀಶ್, ಮುಖಂಡರಾದ ಹೆಬ್ಬೆರಳು ಸಿದ್ದೇಗೌಡ, ಕೆ.ಎಸ್.ನಂಜುಂಡೇಗೌಡ, ಎಂ.ಕೃಷ್ಣ, ಕೆ ಸುರೇಶ್, ಪಟೇಲ್ ಸಿದ್ದೇಗೌಡ, ಸಿದ್ದೇಶ್, ಸತೀಶ್, ಮಂಡ್ಯ ಜಿಲ್ಲಾ ಕಲಾವಿದರ ಒಕ್ಕೂಟದ ಸದಸ್ಯರಾದ  ಹುರುಗಲವಾಡಿ ರಾಮಯ್ಯ, ಅಶ್ವಿನಿ, ಕೀಲಾರ ಕೃಷ್ಣೇಗೌಡ, ನಗರಸಭೆ ಸದಸ್ಯ ಶ್ರೀಧರ್, ಟಿ.ಡಿ ನಾಗರಾಜ್, ದೇವರಾಜ್ ಕೊಪ್ಪ, ಉಮಾಶಂಕರ್, ಶೇಖರ್, ಪುಟ್ಟ ಮಂಚಮ್ಮ, ಮಂಜುಳ ಪಾಲ್ಗೊಂಡಿದ್ದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ.ಕೆ ಬೋರಯ್ಯ,ಜಿಬಿ ಶಿವಕುಮಾರ್,ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ಬೋರ್ ವೆಲ್ ನಾರಾಯಣ, ದಸಂಸ ಎಂ.ವಿ ಕೃಷ್ಣ, ಕೋಮಲ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!